ಕರ್ನಾಟಕ

karnataka

ETV Bharat / bharat

IAS ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ಕೇಂದ್ರ ನಾಗರಿಕ ಸೇವೆಗಳ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿ ಪ್ರಕಟ - ಯುಪಿಎಸ್​ಸಿ ಪರೀಕ್ಷಾ ದಿನಾಂಕ

2019ನೇ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಭಾಗವಾಗಿರುವ ವ್ಯಕ್ತಿತ್ವ ಪರೀಕ್ಷೆ 2020ರ ಜುಲೈ 20ರಿಂದ ಮುಂದುವರಿಯಲಿದೆ. 2020ನೇ ಸಾಲಿನ ಎನ್‌ಡಿಎ ಮತ್ತು ಎನ್‌ಎ ಪರೀಕ್ಷೆಗಳು ಸೆಪ್ಟೆಂಬರ್‌ 6ರಂದು ನಿಗದಿಯಾಗಿದೆ. ಐಇಎಸ್‌/ಐಎಸ್‌ಎಸ್ 2020 ಪರೀಕ್ಷೆ ಅಕ್ಟೋಬರ್‌ 16ರಂದು ಹಾಗೂ ಇಂಜಿನಿಯರಿಂಗ್‌ ಸರ್ವೀಸಸ್‌ ಮುಖ್ಯ ಪರೀಕ್ಷೆ ಆಗಸ್ಟ್‌ 9ರಂದು ನಡೆಯಲಿವೆ ಎಂದು ಆಯೋಗ ತಿಳಿಸಿದೆ.

Union Public Service Commission
ಯುಪಿಎಸ್​ಸಿ

By

Published : Jun 5, 2020, 5:54 PM IST

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಶುಕ್ರವಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನಾಗರಿಕ ಸೇವಾ ಪರೀಕ್ಷೆಗಳು ಮತ್ತು ಸಂದರ್ಶನಗಳ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪರಿಷ್ಕೃತ ಕ್ಯಾಲೆಂಡರ್ ಪ್ರಕಾರ, ಯುಪಿಎಸ್​ಸಿ ಸಿವಿಲ್ ಸರ್ವೀಸಸ್ ಮತ್ತು ಐಎಫ್ಎಸ್ ಪ್ರಾಥಮಿಕ ಪರೀಕ್ಷೆಗಳನ್ನು ಇದೇ 2020ರ ಅಕ್ಟೋಬರ್ 4ರಂದು ನಡೆಸಲಾಗುವುದು.

ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆಯನ್ನು 2021ರ ಜನವರಿ 8ರಂದು ನಡೆಯಲಿದೆ. ಭಾರತೀಯ ಅರಣ್ಯ ಸೇವೆ (ಮುಖ್ಯ)- 2020 ಪರೀಕ್ಷೆಯು 2021 ಫೆಬ್ರವರಿ 28ರಂದು ನಡೆಯಲಿದೆ.

2019ನೇ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಭಾಗವಾಗಿರುವ ವ್ಯಕ್ತಿತ್ವ ಪರೀಕ್ಷೆ 2020ರ ಜುಲೈ 20ರಿಂದ ಮುಂದುವರಿಯಲಿದೆ. 2020ನೇ ಸಾಲಿನ ಎನ್‌ಡಿಎ ಮತ್ತು ಎನ್‌ಎ ಪರೀಕ್ಷೆಗಳು ಸೆಪ್ಟೆಂಬರ್‌ 6ರಂದು ನಿಗದಿಯಾಗಿದೆ. ಐಇಎಸ್‌/ಐಎಸ್‌ಎಸ್ 2020 ಪರೀಕ್ಷೆ ಅಕ್ಟೋಬರ್‌ 16ರಂದು ಹಾಗೂ ಇಂಜಿನಿಯರಿಂಗ್‌ ಸರ್ವೀಸಸ್‌ ಮುಖ್ಯ ಪರೀಕ್ಷೆ ಆಗಸ್ಟ್‌ 9ರಂದು ನಡೆಯಲಿವೆ ಎಂದು ಆಯೋಗ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ www.upsc.gov.in ಅಥವಾ https://www.upsc.gov.in/sites/default/files/ApprovedRevisedExamCal-2020-050620.pdf ವೆಬ್‌ಸೈಟ್​ಗೆ ಭೇಟಿ ನೀಡಿ.

ABOUT THE AUTHOR

...view details