ಕರ್ನಾಟಕ

karnataka

ETV Bharat / bharat

ಸರ್ಕಾರದ ಆಡಳಿತಕ್ಕಿಂತ ಯುಪಿಯಲ್ಲಿ ಕ್ರೈಂ ಮೀಟರ್​ ವೇಗ ಪಡೆದಿದೆ: ಪ್ರಿಯಾಂಕಾ ಕಿಡಿ - ಲಖನೌ

ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಯುಪಿ ಸಿಎಂ ವಿರುದ್ಧ ಪ್ರಿಯಾಂಕ ವಾಗ್ದಾಳಿ
ಯುಪಿ ಸಿಎಂ ವಿರುದ್ಧ ಪ್ರಿಯಾಂಕ ವಾಗ್ದಾಳಿ

By

Published : Aug 25, 2020, 11:09 AM IST

ಲಖನೌ (ಉತ್ತರಪ್ರದೇಶ): ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯೇ ಅಧಿಕಾವಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಆಡಳಿತಕ್ಕಿಂತ ಕ್ರೈಂ ಮೀಟರ್​ ವೇಗ ಪಡೆದುಕೊಂಡಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

"ಉತ್ತರಪ್ರದೇಶ ಸರ್ಕಾರವು ವೇಗದ ಬಗ್ಗೆ ಮಾತನಾಡುತ್ತದೆ. ಆದರೆ ಅಪರಾಧದ ಮೀಟರ್ ಎರಡು ಪಟ್ಟು ವೇಗದಲ್ಲಿ ಓಡುತ್ತಿದೆ" ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

"ಯುಪಿಯಲ್ಲಿ ಅಪರಾಧ ಮೀಟರ್" ಎಂಬ ಶೀರ್ಷಿಕೆಯ ಅಪರಾಧದ ಘಟನೆಗಳನ್ನು ಚಿತ್ರಿಸುವ ಗ್ರಾಫಿಕ್ಸ್​​ಅನ್ನು ಅವರು ಟ್ವೀಟ್​ ಜೊತೆಗೆ ಹಂಚಿಕೊಂಡಿದ್ದಾರೆ. "ಇದು ಯುಪಿಯಲ್ಲಿ ಕೇವಲ ಎರಡು ದಿನಗಳ ಅಪರಾಧ ಪ್ರಕರಣಗಳ ಮೀಟರ್ ಆಗಿದೆ. ಅಪರಾಧಗಳು ರಾಜ್ಯದ ಬೀದಿ ಬೀದಿಗಳಲ್ಲಿ ಗೋಚರಿಸುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಉತ್ತರಪ್ರದೇಶ ಸರ್ಕಾರ ಸಮಸ್ಯೆಗಳನ್ನು ಪರಿಹರಿಸುವ ಬದಲು ಜನರಿಗೆ ಬೆದರಿಕೆ ಹಾಕುತ್ತಿದೆ ಎಂದು ಶುಕ್ರವಾರ ಆರೋಪಿಸಿದ್ದರು.

ರಸಗೊಬ್ಬರ ಹಗರಣದ ಬಗ್ಗೆ ಪತ್ರಿಕೆಯೊಂದರ ವರದಿಯ ತುಣುಕುಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

ABOUT THE AUTHOR

...view details