ಹರಿದ್ವಾರ:ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶ ಮತ್ತು ಅತ್ಯಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವ ಕುಂಭಮೇಳಕ್ಕೆ ಮಕರ ಸಂಕ್ರಾಂತಿಯ ಶುಭದಿನ (ಜ. 14) ಚಾಲನೆ ದೊರೆಯಲಿದೆ.
ಹರಿದ್ವಾರ ಕುಂಭ 2021ರ ಮುನ್ನು ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳಿಗಾಗಿ ಮೇಲ್ಭಾಗದ ಗಂಗಾ ಕಾಲುವೆ ಅಕ್ಟೋಬರ್ 15ರ ಮಧ್ಯರಾತ್ರಿಯಿಂದ ನವೆಂಬರ್ 15ರ ಮಧ್ಯರಾತ್ರಿಯವರೆಗೆ ಮುಚ್ಚಲಾಗುತ್ತಿದೆ.
ಉತ್ತರ ಪ್ರದೇಶದ ವಿಶೇಷ ಕಾರ್ಯದರ್ಶಿ ಮುಷ್ತಾಕ್ ಅಹ್ಮದ್, ರಾಜ್ಯದ ಮುಖ್ಯ ಇಂಜಿನಿಯರ್ ಮತ್ತು ನೀರಾವರಿ ಮತ್ತು ಜಲಸಂಪನ್ಮೂಲ ವಿಭಾಗದ ಮುಖ್ಯಸ್ಥರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಮೇಲ್ ಗಂಗಾ ಮೇಲ್ಕಾಲುವೆ ಮುಚ್ಚಲು ಆದೇಶ ಹೊರಡಿಸಿದೆ. ಅಕ್ಟೋಬರ್ 15ರ ಮಧ್ಯರಾತ್ರಿಯಿಂದ ನವೆಂಬರ್ 15ರ ಮಧ್ಯರಾತ್ರಿ ವರೆಗೆ ಮುಚ್ಚಲಾಗಿದೆ. ಇದೇ ಸಮಯದಲ್ಲಿ ಕುಂಭಮೇಳ 2021ರ ಪ್ರಸ್ತಾವಿತ ಮತ್ತು ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ನೀರಾವರಿ ಇಲಾಖೆಯು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
2021ರ ಮಹಾ ಕುಂಭಮೇಳ ಹರಿದ್ವಾರದಲ್ಲಿ ನಡೆಯಲಿದೆ. ಇದಕ್ಕಾಗಿ ಸ್ನಾನದ ದಿನಾಂಕಗಳನ್ನು ಜನವರಿ 14 ರಿಂದ ಈಗಾಗಲೇ ಘೋಷಿಸಲಾಗಿದೆ. ಉತ್ತರಾಖಂಡ ಕ್ಯಾಬಿನೆಟ್ ಸಚಿವ ಮದನ್ ಕೌಶಿಕ್ ಅವರು ಕುಂಭಮೇಳ 2021ರ ಸಂದರ್ಭದಲ್ಲಿ ನಿತ್ಯ 35 ರಿಂದ 50 ಲಕ್ಷ ಜನರು ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ ಎಂದು ಅಂದಾಜಿಸಿದೆ.