ಕರ್ನಾಟಕ

karnataka

ETV Bharat / bharat

ಜೈಸಲ್ಮೇರ್​ನಲ್ಲಿ ಅರ್ಜುನ್ ಮಾರ್ಕ್ 1 ಆಲ್ಫಾದ ಸುಧಾರಿತ ಆವೃತ್ತಿಯ ಪರೀಕ್ಷೆ - ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ ಪ್ರಯೋಗ

ಅರ್ಜುನ್ ಮಾರ್ಕ್ 1 ಆಲ್ಫಾ ಟ್ಯಾಂಕರ್​​ನ ಸುಧಾರಿತ ಆವೃತ್ತಿಯನ್ನು ರಾಜಸ್ಥಾನದಲ್ಲಿ ಭಾರತೀಯ ಸೇನೆ ಪರೀಕ್ಷೆ ನಡೆಸಿದೆ.

Arjun Mark 1
ಅರ್ಜುನ್ ಮಾರ್ಕ್1 ಆಲ್ಫಾ

By

Published : Dec 8, 2020, 6:35 PM IST

ಜೈಸಲ್ಮೇರ್ (ರಾಜಸ್ಥಾನ): ಪಾಕಿಸ್ತಾನದ ಗಡಿ ಜಿಲ್ಲೆ ರಾಜಸ್ಥಾನ ಮತ್ತೊಮ್ಮೆ ಆಧುನಿಕ ಶಸ್ತ್ರಾಸ್ತ್ರಗಳ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಯುದ್ಧ ಟ್ಯಾಂಕರ್​ ಆದ ಅರ್ಜುನ್ ಮಾರ್ಕ್ 1 ಆಲ್ಫಾ ಟ್ಯಾಂಕರ್​​ನ ಸುಧಾರಿತ ಆವೃತ್ತಿಯನ್ನು ಪರೀಕ್ಷಿಸಲಾಗಿದೆ.

ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್​ನಲ್ಲಿ ಪ್ರಯೋಗ ನಡೆಸಲಾಗಿದ್ದು, ಈ ಟ್ಯಾಂಕರ್​ಅನ್ನು​ ಮೇಕ್​ ಇನ್ ಇಂಡಿಯಾ ಯೋಜನೆಯಡಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಮಿಸಿದೆ.

ಇದನ್ನೂ ಓದಿ:ವೈರಿ ಹಡಗು ವಿರೋಧಿ ಬ್ರಹ್ಮೋಸ್ ಸೂಪರ್​ಸಾನಿಕ್ ಕ್ಷಿಪಣಿ ಪ್ರಯೋಗ ಯಶಸ್ವಿ

ಟ್ಯಾಂಕರ್​​ನ ಹೊಸ ಆವೃತ್ತಿಯಲ್ಲಿ ಸ್ವಯಂಚಾಲಿತವಾಗಿ ಕ್ಷಿಪಣಿ ಉಡಾವಣೆಯಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಭಾರತೀಯ ಸೇನೆಯ ಶಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದ ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.

ಕೆಲವು ವಾರಗಳ ಹಿಂದೆ ಜೈಸಲ್ಮೇರ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ಟ್ಯಾಂಕರ್​​ನಲ್ಲಿ ಪ್ರಯಾಣಿಸಿದ್ದರು.

ಅಧಿಕೃತ ಮೂಲಗಳ ಪ್ರಕಾರ, ಸೇನೆಯ ಅಗತ್ಯತೆಯ ಆಧಾರದ ಮೇಲೆ ಟ್ಯಾಂಕರ್​​​ ಮಾರ್ಪಾಟು ಮಾಡಲಾಗಿದೆ. ಈ ಟ್ಯಾಂಕರ್ ನವೀಕೃತ ಆವೃತ್ತಿಯನ್ನು ಶೀಘ್ರದಲ್ಲೇ ಸೇನೆಗೆ ಸೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details