ನವದೆಹಲಿ: ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವದ ರಾಜ್ಪಥ್ನಲ್ಲಿ ಮೊದಲ ಬಾರಿಗೆ ಸುಧಾರಿತ ಶಿಲ್ಕಾ ಶಸ್ತ್ರಾಸ್ತ್ರದ ಪ್ರದರ್ಶನ ನಡೆಯಲಿದೆ. ಇದರ ಪ್ರದರ್ಶನ ಭಾರತೀಯ ಸೇನೆಯ ಮಹಿಳಾ ಕಮಾಂಡರ್ ಪ್ರೀತಿ ಚೌಧರಿ ನೇತೃತ್ವದಲ್ಲಿ ನಡೆಯುತ್ತಿರುವುದು ವಿಶೇಷ.
"ಮೊದಲ ಬಾರಿಗೆ ರಾಜಪಥ್ನಲ್ಲಿ ನವೀಕರಿಸಿದ ಶಿಲ್ಕಾ ಪ್ರದರ್ಶನ ನಡೆಯಲಿದೆ. ಇದು ನೆಲದ ಮೇಲೆ ಎರಡು ಕಿಲೋಮೀಟರ್ ದೂರದಲ್ಲೇ ಶತ್ರುಗಳನ್ನು ಗುರಿಯಾಗಿಸಿ ಅವರನ್ನು ಸದೆಬಡಿಯಲಿದೆ. ಗಾಳಿಯಲ್ಲಿ ಸುಮಾರು 2.5 ಕಿಲೋಮೀಟರ್ವರೆಗೆ ಶತ್ರುಗಳನ್ನು ಪತ್ತೆಹಚ್ಚಿ ಶೂಟ್ ಮಾಡಲಿದೆ" ಎಂದು ಕ್ಯಾಪ್ಟನ್ ಪ್ರೀತಿ ಚೌಧರಿ ಹೇಳಿದ್ದಾರೆ.