ಭಿವಂಡಿ(ಮಹಾರಾಷ್ಟ್ರ):ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ಘಟನೆಯಲ್ಲಿ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಎನ್ಡಿಆರ್ಎಫ್ ಮೂಲಗಳು ತಿಳಿಸಿವೆ.
ಭಿವಂಡಿ ಕಟ್ಟಡ ದುರಂತ: 20ಕ್ಕೆ ಏರಿದ ಸಾವಿನ ಸಂಖ್ಯೆ
ಮಹಾರಾಷ್ಟ್ರದಲ್ಲಿನ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಭಿವಂಡಿ ಕಟ್ಟಡ ದುರಂತ
ಭಿವಂಡಿ ಪಟ್ಟಣದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ದುರ್ಘಟನೆ ನಡೆದಿದ್ದು, 21 ಫ್ಲ್ಯಾಟ್ಗಳಿದ್ದ ಜಿಲಾನಿ ಹೆಸರಿನ ಕಟ್ಟಡ ಕುಸಿದು ಅವಘಡ ಸಂಭವಿಸಿತ್ತು. 1984ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡ ದುರ್ಬಲವಾಗಿತ್ತು ಎಂದು ಹೇಳಲಾಗಿದೆ.
ಪ್ರಕರಣದ ತನಿಖೆಗೆಗಾಗಿ ಥಾಣೆ ಜಿಲ್ಲೆಯ ಹೆಚ್ಚುವರಿ ಆಯುಕ್ತ ಓಂಪ್ರಕಾಶ್ ದಿವ್ತೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈಗಾಗಲೇ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಈ ವಿಚಾರವಾಗಿ ವಜಾಗೊಳಿಸಲಾಗಿದ್ದು, ಕಟ್ಟಡದ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
Last Updated : Sep 22, 2020, 8:43 AM IST