ಬಂಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾಂಡಾ ಪಟ್ಟಣದ ಬಾಬಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಭತಿ ಗ್ರಾಮದ ದೇವಾಲಯವೊಂದರಲ್ಲಿ ಯುವಕನೊಬ್ಬ ತನ್ನ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಯಾದವ್ ಎಂಬುವವ ಬ್ಲೇಡ್ ತೆಗೆದುಕೊಂಡು ತನ್ನ ನಾಲಿಗೆ ಕತ್ತರಿಸಿ ದೇವಿ ಮಾತಾ ದೇವಸ್ಥಾನದ ಮುಂದೆ ಇರಿಸಿದ್ದಾಗಿ ತಿಳಿದುಬಂದಿದೆ.
ದೇವಾಲಯದ ಒಳಗಿದ್ದ ಆತನ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಯಾದವ್ನನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾದರು. ಆದರೆ, ಆತ ಚಿಕಿತ್ಸೆ ಒಪಡೆಯಲು ನಿರಾಕರಿಸಿದ.
ಆತ ತನ್ನ ನಾಲಿಗೆ ಕತ್ತರಿಸುವ ಮೊದಲು ದೇವರು ತನ್ನ ಆತ್ಮ ಪ್ರವೇಶಿಸಿದ್ದಾನೆ ಎಂದು ಹೇಳಿಕೊಂಡ. ಆತನ ಯೋಗಕ್ಷೇಮಕ್ಕಾಗಿ ದೇವಿಯನ್ನು ಸಮಾಧಾನಪಡಿಸಲು ತಲೆ ಕತ್ತರಿಸಲು ಬಯಸಿದ. ದೇವಿ ಮಾತಾ ತಲೆ ಕತ್ತರಿಸ ಬೇಡ ಎಂದಿದ್ದಾಳೆ ಎನ್ನುತ್ತಾ ತನ್ನ ನಾಲಿಗೆ ಕತ್ತರಿಸಿ ದೇವಿ ಮಾತಾಗೆ ಅರ್ಪಿಸಿದ ಎಂದು ಪ್ರತ್ಯಕ್ಷದರ್ಶಿ ಶ್ಯಾಮ್ ಸುಂದರ್ ಯಾದವ್ ಹೇಳಿದ್ದಾರೆ.
ದೇವಿಯು ತನ್ನ ಕನಸಿನಲ್ಲಿ ಬಂದ, ಆತನ ಕುಟುಂಬದ ಯೋಗಕ್ಷೇಮಕ್ಕಾಗಿ ಶಿರಚ್ಛೇದ ಮಾಡಲು ಸೂಚಿಸಿದಳು. ಆದರೆ, ನಾಲಿಗೆ ಕತ್ತರಿಸಿಕೊಂಡ. ಈ ಘಟನೆಯ ಬಳಿಕ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಆತನ ನಾಲಿಗೆಯನ್ನು ಮತ್ತೆ ಜೋಡಿಸಲು ಪ್ರಯತ್ನಿಸಿದರು, ಯಶಸ್ವಿ ಆಗಲಿಲ್ಲ ಎಂದನು.