ಕರ್ನಾಟಕ

karnataka

ETV Bharat / bharat

ಬಸ್​​ಗಾಗಿ ಕಾಯುತ್ತಿದ್ದವಳನ್ನು ಡ್ರಾಪ್​​​​ ನೀಡುವ ನೆಪದಲ್ಲಿ ಕಾರು ಹತ್ತಿಸಿಕೊಂಡರು! ಆಮೇಲೇನಾಯ್ತು? - ಮೂವರು ಕಾಮುಕರು

ಉತ್ತರಪ್ರದೇಶದ ಜಹಾನ್​​ಪುರ್​​ದಲ್ಲಿ ಬಸ್​ಗಾಗಿ ಕಾಯುತ್ತಿದ್ದ ಮಹಿಳೆಗೆ ಡ್ರಾಪ್​ ನೀಡುವ ನೆಪ ಹೇಳಿ ಆಕೆಯ ಮೇಲೆ ಮೂವರು ಕಾಮುಕರು ಕಾರಿನಲ್ಲೇ ಅತ್ಯಾಚಾರಗೈದಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Aug 20, 2019, 6:22 PM IST

ಜಹಾನ್​ಪುರ್​(ಯುಪಿ): ಬಸ್​​ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಡ್ರಾಪ್​​ ನೀಡುವ ನೆಪ ಹೇಳಿ ಕಾರಿನಲ್ಲಿ ಹತ್ತಿಸಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದಿರುವ ಘಟನೆ ಉತ್ತರಪ್ರದೇಶದ ಜಹಾನ್​ಪುರ್​​ದಲ್ಲಿ ನಡೆದಿದೆ.

35 ವರ್ಷದ ಮಹಿಳೆ ಬಸ್​​ಗಾಗಿ ಕಾಯುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಮೂವರು ಆಕೆಗೆ ಡ್ರಾಪ್​ ನೀಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾರೆ. ಆಕೆ ಕಾರು ಹತ್ತಿಕೊಳ್ಳುತ್ತಿದ್ದಂತೆ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದು, ಜೀವಬೆದರಿಕೆ ಹಾಕಿದ್ದಾರೆ.

ಅಷ್ಟೇ ಅಲ್ಲ, ಆಕೆಯನ್ನು ನಡುರಸ್ತೆಯಲ್ಲೇ ಬಿಟ್ಟ ಕಾಮುಕರು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ಮಹಿಳೆ ನಿಂತಿದ್ದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಓರ್ವ ವ್ಯಕ್ತಿಯನ್ನ ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಮಹಿಳಾ ಡಾಕ್ಟರ್​ ಮೇಲೆ ಮೂವರು ಕಾಮುಕರು ಅತ್ಯಾಚಾರ ಮಾಡಿ, ತದನಂತರ ಆಕೆಯನ್ನ ಅರಣ್ಯ ಪ್ರದೇಶದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿತ್ತು.

ABOUT THE AUTHOR

...view details