ಕರ್ನಾಟಕ

karnataka

ETV Bharat / bharat

ರೇಪ್​​ ಆರೋಪಿಗೆ ಜಾಮೀನು: ಉನ್ನಾವೋ ಎಸ್​ಪಿ ಕಚೇರಿ ಬಳಿ ಬೆಂಕಿ ಹಚ್ಚಿಕೊಂಡ ಸಂತ್ರಸ್ತೆ - ಅತ್ಯಾಚಾರ ಆರೋಪಿಗೆ ಜಾಮೀನು ದೊರೆತ ಹಿನ್ನೆಲೆ ಯುವತಿ ಆತ್ಮಹತ್ಯೆಗೆ ಯತ್ನ

ಅತ್ಯಾಚಾರ ಆರೋಪಿಗೆ ಹೈಕೋರ್ಟ್​ನಿಂದ ನಿರೀಕ್ಷಿತ ಜಾಮೀನು ದೊರೆತ ಹಿನ್ನೆಲೆ ರೇಪ್​​ ಸಂತ್ರಸ್ತೆಯು ಉತ್ತರಪ್ರದೇಶದ ಉನ್ನಾವೋದ ಎಸ್‌ಪಿ ಕಚೇರಿ ಬಳಿ ಬೆಂಕಿ ಹಚ್ಚಿಕೊಂಡಿದ್ದು, ಶೇ.70ರಷ್ಟು ಸುಟ್ಟ ಗಾಯಗಳಾಗಿರುವ ಆಕೆಯನ್ನು ಕಾನ್ಪುರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

Woman sets herself ablaze in Unnao
ಉನ್ನಾವೋದಲ್ಲಿ ಬೆಂಕಿ ಹಚ್ಚಿಕೊಂಡ ಅತ್ಯಾಚಾರ ಸಂತ್ರಸ್ತೆ

By

Published : Dec 17, 2019, 6:22 AM IST

ಉನ್ನಾವೋ: ಅತ್ಯಾಚಾರ ಆರೋಪಿಗೆ ನ್ಯಾಯಾಲಯದಿಂದ ನಿರೀಕ್ಷಿತ ಜಾಮೀನು ಸಿಕ್ಕ ಹಿನ್ನೆಲೆ 23 ವರ್ಷದಸಂತ್ರಸ್ತ ಯುವತಿಯೊಬ್ಬಳು ಉತ್ತರ ಪ್ರದೇಶದ ಉನ್ನಾವೋ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿ ಬಳಿ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ.

ಯುವತಿಯ ದೇಹವು ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಆಕೆಯನ್ನು ಕಾನ್ಪುರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಉನ್ನಾವೋ ಎಸ್‌ಪಿ ಸೇರಿದಂತೆ ಎಲ್ಲ ಉನ್ನತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಆರೋಪಿಯು ಸಂತ್ರಸ್ತೆಗೆ 10 ವರ್ಷಗಳಿಂದ ತಿಳಿದಿದ್ದು, ಇಬ್ಬರೂ ಪರಸ್ಪರ ಸಂಬಂಧ ಹೊಂದಿದ್ದರು. ಆದರೆ ಆರೋಪಿಯು ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ನೊಂದ ಯುವತಿಯು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ದೂರು ದಾಖಲಿಸಿದ್ದರು. ಆದರೆ ಆರೋಪಿಗೆ ಹೈಕೋರ್ಟ್​ನಿಂದ ಜಾಮೀನು ದೊರೆತಿದ್ದರಿಂದ ಯುವತಿ ಸ್ವತಃ ಬೆಂಕಿ ಹಚ್ಚಿಕೊಂಡಿದ್ದು, ಪೊಲೀಸರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ಯುವತಿಯು ಉನ್ನಾವೋದ ಹಸಂಗಂಜ್ ಕೊಟ್ವಾಲಿ ಪ್ರದೇಶದವರು ಎಂದು ತಿಳಿದುಬಂದಿದೆ.

For All Latest Updates

ABOUT THE AUTHOR

...view details