ಕರ್ನಾಟಕ

karnataka

ETV Bharat / bharat

ವರದಕ್ಷಿಣೆ ಕಿರುಕುಳ: ಮಹಿಳೆ ಜೀವಂತವಾಗಿ ಸುಟ್ಟ ಗಂಡ

ಕಟ್ಟಿಕೊಂಡ ಹೆಂಡತಿಗೆ ತಲಾಖ್​ ನೀಡಿರುವ ಗಂಡ, ವರದಕ್ಷಿಣಿ ಕಿರುಕುಳ ನೀಡಿ ಜೀವಂತವಾಗಿ ಸುಟ್ಟು ಹಾಕುವ ಉದ್ದೇಶದಿಂದ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

UP woman burnt alive
ಮಹಿಳೆಯನ್ನ ಜೀವಂತವಾಗಿ ಸುಟ್ಟ ಗಂಡ

By

Published : Feb 10, 2020, 2:43 PM IST

ರಾಂಪುರ್​(ಉತ್ತರ ಪ್ರದೇಶ):ಕಟ್ಟಿಕೊಂಡ ಹೆಂಡತಿ ವರದಕ್ಷಿಣೆ ಕಿರುಕುಳ ನೀಡಿರುವ ಗಂಡ, ಆತನ ಸಹೋದರರೊಂದಿಗೆ ಸೇರಿ ಬೆಂಕಿ ಹಚ್ಚಿರುವ ಘಟನೆ ಉತ್ತರಪ್ರದೇಶದ ರಾಂಪುರ್​ದಲ್ಲಿ ನಡೆದಿದೆ.

ಮಹಿಳೆಯನ್ನ ಜೀವಂತವಾಗಿ ಸುಟ್ಟ ಗಂಡ

ಪತ್ನಿಗೆ ಈಗಾಗೇ ತ್ರಿಬಲ್​ ತಲಾಖ್​ ನೀಡಿರುವ ವ್ಯಕ್ತಿ, ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟು ಹಾಕಲು ಮುಂದಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಐವರ ವಿರುದ್ಧ ದೂರು ದಾಖಲಾಗಿದೆ. ಮಹಿಳೆಗೆ 10 ಲಕ್ಷ ರೂ ನೀಡುವಂತೆ ಒತ್ತಡ ಹೇರುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಆರಿಫ್​ ಜತೆ ಮದುವೆಯಾಗಿದ್ದ ಈ ಮಹಿಳೆಗೆ ಈಗಾಗಲೇ ಒಂದು ವರ್ಷದ ಮಗಳಿದ್ದಾಳೆ.

ಮದುವೆ ವೇಳೆ ಗಂಡನ ಮನೆಯವರು ಕೇಳಿದ್ದ ಎಲ್ಲ ಉಡುಗೊರೆ ನೀಡಿದ್ದರೂ ನಿತ್ಯ ಆಕೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈಗಾಗಲೇ ಸೆಕ್ಷನ್​ 498ಎ, 307 ಅಡಿಯಲ್ಲಿ ದೂರು ದಾಖಲಾಗಿದ್ದು, ಆರೋಪಿ ವಿಚಾರಣೆ ನಡೆಸಲಾಗುತ್ತಿದೆ.

ABOUT THE AUTHOR

...view details