ಕರ್ನಾಟಕ

karnataka

ETV Bharat / bharat

ಯುಪಿಯಲ್ಲಿ ಮತ್ತೊಂದು ಹೇಯ ಕೃತ್ಯ: ಕಾಲೇಜ್​ ಕ್ಯಾಂಪಸ್​​ನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯೊಬ್ಬ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ
ಅಪ್ರಾಪ್ತೆ ಮೇಲೆ ಅತ್ಯಾಚಾರ

By

Published : Oct 12, 2020, 12:57 PM IST

ಝಾನ್ಸಿ (ಉತ್ತರ ಪ್ರದೇಶ):ನಾಗರಿಕ ಸೇವಾ ಪರೀಕ್ಷೆ ನಡೆಯುತ್ತಿರುವಾಗ ಪೊಲೀಸ್ ಭದ್ರತೆ ಇದ್ದರೂ ಸಹ 17 ವರ್ಷದ ಅಪ್ರಾಪ್ತೆ ಮೇಲೆ ಉತ್ತರ ಪ್ರದೇಶದ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ವಿಡಿಯೋ ಮಾಡಿದ್ದಲ್ಲದೆ, ಆಕೆಯ ಗೆಳೆಯನನ್ನು ಸಹ ಥಳಿಸಲಾಗಿದೆ.

ಸಂತ್ರಸ್ತೆಯು ತನ್ನ ಗೆಳೆಯನನ್ನು ಭೇಟಿಯಾಗಲು ಬಂದ ಸಂದರ್ಭದಲ್ಲಿ ಬಲವಂತವಾಗಿ ಆಕೆಯನ್ನು 10ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜು​ ಕ್ಯಾಂಪಸ್​ ಒಳಗಡೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆ ಮೇಲೆ ಓರ್ವ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕೆ ಬಳಿ ಇದ್ದ ರೂ. 2000 ದೋಚಿದ್ದಾರೆ. ಇನ್ನು ಕಾಲೇಜು ಕ್ಯಾಂಪಸ್​ನಲ್ಲಿ ನಾಗರಿಕ ಸೇವೆಗಳ (ಪಿಸಿಎಸ್) ಪರೀಕ್ಷೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿತ್ತು. ಹೀಗಿದ್ದರೂ ಅತ್ಯಾಚಾರ ನಡೆದಿದೆ.

ಘಟನೆ ಬಗ್ಗೆ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಪಿ.ದಿನೇಶ್​ ಕುಮಾರ್​ ಮಾತನಾಡಿದ್ದು, "ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಭರತ್​ ಮತ್ತು ರೋಹಿತ್​ ಸೈನಿ ಬಂಧಿತರು. ತನ್ನ ಸ್ನೇಹಿತನನ್ನು ಭೇಟಿಯಾಗಲು ತೆರಳಿದ್ದ ಸಂತ್ರಸ್ತೆಯನ್ನು ಬಲವಂತವಾಗಿ ಕಾಲೇಜಿನೊಳಗೆ ಕರೆದೊಯ್ದು ಆಕೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಅಷ್ಟೇ ಅಲ್ಲದೆ ಆಕೆಯ ಗೆಳಯನನ್ನೂ ಥಳಿಸಿದ್ದಾರೆ. ಘಟನೆಯ ವಿಡಿಯೋವನ್ನೂ ಮಾಡಿ ಆಕೆ ಬಳಿಯಿಂದ 2000 ರೂ. ದೋಚಿದ್ದಾರೆ" ಎಂದು ಹೇಳಿದರು.

"ಇನ್ನು ಕ್ಯಾಂಪಸ್​ ಬಳಿ ಇದ್ದ ಪೊಲೀಸ್​ಗೆ ಸಂತ್ರಸ್ತೆಯ ಕೂಗು ಕೇಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದಾರೆ. ಆದರೆ ಈ ವೇಳೆ ಆರೋಪಿಗಳು ಪರಾರಿಯಾಗಿದ್ದು, ಆಕೆಯನ್ನು ಸಿಪ್ರೀ ಬಜಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆ ವಿಷಯ ಬಹಿರಂಗಗೊಳಿಸಿದ್ದಾಳೆ" ಎಂದಿದ್ದಾರೆ.

ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಮಾತನಾಡಿ, "ಆರೋಪಿಗಳು ಪಾಲಿಟೆಕ್ನಿಕ್‌ನ ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿದ್ದು, ಅವರು ಎಲ್ಲಿದ್ದಾರೆಂಬ ಮಾಹಿತಿ ಲಭ್ಯವಿಲ್ಲ. ಇಡೀ ಕಾಲೇಜು ಕ್ಯಾಂಪಸ್​ಗೆ ಒಬ್ಬ ಭದ್ರತಾ ಸಿಬ್ಬಂದಿ ಮಾತ್ರ ಇದ್ದಾರೆ. ಆದರೆ ಅವರು ಘಟನೆ ನಡೆಯುವಾಗ ಎಲ್ಲಿದ್ದರು ಎಂಬುದು ತಿಳಿದಿಲ್ಲ" ಎಂದರು.

ಸದ್ಯ ಐಪಿಸಿ ಸೆಕ್ಷನ್ 120 ಬಿ, 376-ಡಿ, 395, 386, 323, ಐಟಿ ಕಾಯ್ದೆಯ ಸೆಕ್ಷನ್ 66 ಡಿ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 3/4 ರ ಅಡಿಯಲ್ಲಿ ಮುಖ್ಯ ಆರೋಪಿ ರೋಹಿತ್ ಸೈನಿ, ಭರತ್ ಮತ್ತು ಇತರ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

"ಇತರ ಆರೋಪಿಗಳನ್ನು ಬಂಧಿಸಲು ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳನ್ನು ಗುರುತಿಸಿ ಅವರ ವಿವರಗಳನ್ನು ನೀಡಲು ಕಾಲೇಜು ಆಡಳಿತ ಮಂಡಳಿಗೆ ಸೂಚಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details