ಲಕ್ನೋ(ಉತ್ತರ ಪ್ರದೇಶ):ಐಜಿ ಎಸ್‌ಟಿಎಫ್ ಅಮಿತಾಬ್ ಯಶ್ ಅವರು ಉತ್ತರ ಪ್ರದೇಶದ ಎಲ್ಲಾ ಎಸ್‌ಟಿಎಫ್ ಅಧಿಕಾರಿಗಳು ಮತ್ತು ನೌಕರರಿಗೆ ತಮ್ಮ ಹಾಗೂ ಕುಟುಂಬಸ್ಥರ ಮೊಬೈಲ್ ಫೋನ್‌ಗಳಲ್ಲಿರುವ ಚೀನಾದ ಆಂಡ್ರಾಯ್ಡ್ ಆ್ಯಪ್ಗಳನ್ನು ತಕ್ಷಣ ಅನ್-ಇನ್ಸ್ಟಾಲ್ ಮಾಡುವಂತೆ ಆದೇಶಿಸಿದ್ದಾರೆ.
ಚೀನಾದ 52 ಆ್ಯಪ್ಗಳನ್ನು ಅನ್-ಇನ್ಸ್ಟಾಲ್ ಮಾಡುವಂತೆ ಗೃಹ ಸಚಿವರ ಆದೇಶ - ಉತ್ತರ ಪ್ರದೇಶ ಗೃಹ ಸಚಿವರ ಆದೇಶ
ಐಜಿ ಎಸ್‌ಟಿಎಫ್ ಅಮಿತಾಬ್ ಯಶ್ ಅವರು ಉತ್ತರ ಪ್ರದೇಶದ ಎಲ್ಲಾ ಎಸ್‌ಟಿಎಫ್ ಅಧಿಕಾರಿಗಳು ಮತ್ತು ನೌಕರರಿಗೆ ತಮ್ಮ ಹಾಗೂ ಕುಟುಂಬಸ್ಥರ ಮೊಬೈಲ್ ಫೋನ್‌ಗಳಲ್ಲಿರುವ ಚೀನಾದ ಆಂಡ್ರಾಯ್ಡ್ ಆ್ಯಪ್ಗಳನ್ನು ತಕ್ಷಣ ಅನ್-ಇನ್ಸ್ಟಾಲ್ ಮಾಡುವಂತೆ ಆದೇಶಿಸಿದ್ದಾರೆ.
![ಚೀನಾದ 52 ಆ್ಯಪ್ಗಳನ್ನು ಅನ್-ಇನ್ಸ್ಟಾಲ್ ಮಾಡುವಂತೆ ಗೃಹ ಸಚಿವರ ಆದೇಶ up stf ordered their personal to uninstall 52 chines apps from their mobiles](https://etvbharatimages.akamaized.net/etvbharat/prod-images/768-512-7679929-371-7679929-1592548046190.jpg)
ಹೆಚ್ಚು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಚೀನಾದ್ದಾಗಿದ್ದು, ನಿಮ್ಮ ಮೊಬೈಲ್‌ನಿಂದ ವೈಯಕ್ತಿಕ ಮಾಹಿತಿ ಮತ್ತು ಇತರ ಡೇಟಾವನ್ನು ಕದಿಯುವ ಸಾಧ್ಯತೆಯಿದೆ. ಹೀಗಾಗಿ ಈ ಅಪ್ಲಿಕೇಶನ್ ಗಳನ್ನು ಕೂಡಲೇ ಅನ್ಇನ್ಸ್ಟಾಲ್ ಮಾಡಿ ಎಂದು ಸೂಚಿಸಿದ್ದಾರೆ. ಈ ಆದೇಶ ಉತ್ತರ ಪ್ರದೇಶ ಗೃಹ ಸಚಿವರ ಕಡೆಯಿಂದ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ದೇಶಾದ್ಯಂತ Boycott China ಎಂಬ ಅಭಿಯಾನ ಶುರುವಾಗಿದೆ. ಚೀನಾದ ಮೊಬೈಲ್ ಅಪ್ಲಿಕೇಶನಗಳನ್ನು ಅನ್ ಇನ್ಸ್ಟಾಲ್ ಮಾಡುವಂತೆ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಗಡಿ ಕ್ಯಾತೆ ತೆಗೆದು ನಮ್ಮ ಸೈನಿಕರ ಮೇಲೆ ಚೀನಾಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆ ಈ ಬೆಳವಣಿಗೆಗಳು ನಡೆದಿವೆ.