ಕರ್ನಾಟಕ

karnataka

ETV Bharat / bharat

30ಕ್ಕೂ ಹೆಚ್ಚು ಪೊಲೀಸರನ್ನ ಜೀವಂತ ಸುಡಲು ಯತ್ನ... ಪೊಲೀಸರಿಂದ ರಿಲೀಸ್​ ಆಯ್ತು ವಿಡಿಯೋ!

ಪೊಲೀಸರು ಉಳಿದುಕೊಂಡಿದ್ದ ಅಂಗಡಿಗೆ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳು. ತಕ್ಷಣವೇ ಹೊರಗೆ ಓಡಿಬಂದು ಅಪಾಯದಿಂದ ಪಾರಾದ 30ಕ್ಕೂ ಹೆಚ್ಚು ಪೊಲೀಸರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಘಟನೆ.

UP Police releases video of Meerut violence showing
30ಕ್ಕೂ ಹೆಚ್ಚು ಪೊಲೀಸರನ್ನ ಜೀವಂತ ಸುಡುವ ಪ್ರಯತ್ನ

By

Published : Jan 2, 2020, 7:44 PM IST

Updated : Jan 3, 2020, 8:45 AM IST

ಮೀರತ್​​: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಕೆಲ ದುಷ್ಕರ್ಮಿಗಳು, ಬೆಂಕಿ ಹಚ್ಚಿ ಪೊಲೀಸರನ್ನು ಸುಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಪೊಲೀಸರು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

30ಕ್ಕೂ ಹೆಚ್ಚು ಪೊಲೀಸರನ್ನ ಜೀವಂತ ಸುಡಲು ಯತ್ನ

ಡಿಸೆಂಬರ್​ 20ರಂದು ಉತ್ತರಪ್ರದೇಶದ ಮೀರತ್​​ನಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನರು ರಸ್ತೆಗೆ ಇಳಿದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟಿದ್ದರು.

ಉದ್ವಿಗ್ನ ಪರಿಸ್ಥಿತಿಯಲ್ಲಿ ಪೊಲೀಸರಿದ್ದ ಅಂಗಡಿಗೆ ಕೆಲ ಪ್ರತಿಭಟನಾಕಾರರು ಬೆಂಕಿ ಹಚ್ಚಿ, ಅವರನ್ನ ಜೀವಂತವಾಗಿ ಸುಡುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸರು ತಕ್ಷಣವೇ ಹೊರಗೆ ಓಡಿಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

Last Updated : Jan 3, 2020, 8:45 AM IST

ABOUT THE AUTHOR

...view details