ನವದೆಹಲಿ:ಸರ್ಕಾರಿ ಅಧಿಕಾರಿಯಿಂದ ತಮ್ಮ ಕಾಲಿಗೆ ಶೂ ಹಾಕಿಸಿಕೊಂಡ ಉತ್ತರಪ್ರದೇಶದ ಸಚಿವ ಲಕ್ಷ್ಮೀನಾರಾಯಣ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ನಿನ್ನೆ ಶಹಜಹಾನ್ಪುರದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಚಿವರು, ಸರ್ಕಾರಿ ಅಧಿಕಾರಿಯಿಂದ ತಮ್ಮ ಕಾಲಿಗೆ ಶೂ ಹಾಕಿಸಿಕೊಂಡ ವಿಡಿಯೋ ವೈರಲ್ ಆಗಿದೆ.
ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಅವರು, ಈ ಕಾರ್ಯವನ್ನು ಶ್ಲಾಘಿಸಬೇಕು. ರಾಮನ ಪಾದುಕೆಗಳೇ 14 ವರ್ಷಗಳ ಆಡಳಿತ ಮಾಡಿದ ಭರತ ಭೂಮಿಯಿದು ಎಂದು ಹೇಳಿದ್ದಾರೆ.
ಈ ಮೊದಲು, ಒಡಿಶಾ ಸಚಿವ ಜೋಗೇಂದ್ರ ಬೆಹೆರ ಅವರು, ಸ್ವಾತಂತ್ರ್ಯ ದಿನಾಚರಣೆ ವೇಳೆ ತಮ್ಮ ಆಪ್ತ ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡು ಸುದ್ದಿಯಾಗಿದ್ದರು. ಇಂತಹ ಘಟನೆಗಳ ಆಗಾಗ್ಗೆ ವರದಿಯಾಗುತ್ತಲೇ ಇವೆ.