ಲಖನೌ: ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವರಾಗಿದ್ದ ಮಾಜಿ ಕ್ರಿಕೆಟಿಗ ಚೇತನ್ ಚೌಹಾನ್ ಮೃತಪಟ್ಟಿದ್ದಾರೆ. ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು.
ಈ ಮೊದಲು ಕೊರೊನಾ ಸೋಂಕಿಗೆ ಗುರಿಯಾಗಿ ಗುಣಮುಖರಾಗಿ ಮನೆಗೆ ಮರಳಿದ್ದ ಸಚಿವರಲ್ಲಿ ಬಳಿಕ ಕಿಡ್ನಿ ಸೋಂಕು ಕಾಣಿಸಿಕೊಂಡಿದೆ. 73 ವರ್ಷದ ಚೌಹಾಣ್, ಪತ್ನಿ ಮತ್ತು ಪುತ್ರ ವಿನಾಯಕ್ ಅವರನ್ನು ಅಗಲಿದ್ದಾರೆ.
ಇವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 19 ರಂದು ಇವರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಬಳಿಕ SGPGIಗೆ ದಾಖಲಿಸಲಾಗಿತ್ತು. ನಿರಂತರ ಚಿಕಿತ್ಸೆಯ ಫಲವಾಗಿ ಕೊರೊನಾ ಸೋಂಕಿನಿಂದ ಮುಕ್ತಿ ಸಿಕ್ಕರೂ, ಚೇತನ್ ಚೌಹಾಣ್ ಅವರಲ್ಲಿ ಕಿಡ್ನಿ ಹಾಗೂ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು.