ಮೀರಠ್(ಉತ್ತರಪ್ರದೇಶ):ಇಲ್ಲಿನ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿವೋರ್ವಳ ಅಪಹರಣ ಮಾಡಿ, ಅತ್ಯಾಚಾರ ಮಾಡಿರುವ ಘಟನೆ ಉತ್ತರಪ್ರದೇಶದ ಮೀರಠ್ನಲ್ಲಿ ನಡೆದಿದೆ.
ಎಂಬಿಎ ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರ ಎಸಗಿದ ನಾಲ್ವರು ಕಾಮುಕರು! - ಎಂಬಿಎ ವಿದ್ಯಾರ್ಥಿನಿ ಮೇಲೆ ರೇಪ್
ಕಾಲೇಜ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಅಪಹರಣ ಮಾಡಿರುವ ನಾಲ್ವರು ಕಾಮುಕರ ಗುಂಪು ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಮೀರಠ್ನಲ್ಲಿ ನಡೆದಿದೆ.
![ಎಂಬಿಎ ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರ ಎಸಗಿದ ನಾಲ್ವರು ಕಾಮುಕರು! ಸಾಂದರ್ಭಿಕ ಚಿತ್ರ](https://etvbharatimages.akamaized.net/etvbharat/prod-images/768-512-6080996-thumbnail-3x2-wdfdfdfd.jpg)
ಕಾಲೇಜ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಗರ್ಮುಖ್ತೇಶ್ವರ ಪ್ರದೇಶದಲ್ಲಿ ಆಕೆಯ ಅಪಹರಣ ಮಾಡಿರುವ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಸಂಜೆಯಾದರೂ ಆಕೆ ಮನೆಗೆ ಬಾರದ ಕಾರಣ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ.
ಪೋಷಕರು ನೀಡಿರುವ ದೂರಿನನ್ವಯ ವಿದ್ಯಾರ್ಥಿನಿ ಮೊಬೈಲ್ ನಂಬರ್ ಬೇಧಿಸಿ ಆಕೆ ಇದ್ದ ಸ್ಥಳಕ್ಕೆ ಹೋಗಿದ್ದಾರೆ. ವಿದ್ಯಾರ್ಥಿನಿ ಬುಲಂದ್ಶಹರ್ನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣವೇ ಯುವತಿಯನ್ನ ಮೀರ್ ಮೆಡಿಕಲ್ ಕಾಲೇಜ್ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದೆ.