ಕರ್ನಾಟಕ

karnataka

ETV Bharat / bharat

X-rayಯಲ್ಲೂ ಕಾಣದ ಹೃದಯ: ವೈದ್ಯರ ಹಾರ್ಟ್​ಬೀಟ್​ ಜೋರು... ಎಲ್ಲೋಯ್ತು ರೋಗಿಯ ಹಾರ್ಟ್​?

ಉತ್ತರ ಪ್ರದೇಶದ ಕುಶಿನಗರದ ಪದ್ರೌನಾ ನಿವಾಸಿ ಜಮಾಲುದ್ದೀನ್ ಎಂಬುವವರು ಮೊದಲ ನೋಟದಲ್ಲಿ ಸಾಮಾನ್ಯವಾಗಿ ಕಾಣಿಸುತ್ತಾರೆ. ಆದರೆ ಅವರು ವೈದ್ಯ ಲೋಕವನ್ನು ಒಂದು ಕ್ಷಣ ದಂಗಾಗುವಂತಹ ವಿಸ್ಮಯಗಳನ್ನು ತಮ್ಮ ದೇಹದಲ್ಲಿ ಇರಿಸಿಕೊಂಡಿದ್ದಾರೆ. ದೇಹದ ಎಲ್ಲ ಅಂಗಾಂಗಳು ತದ್ವಿರುದ್ಧ ಬದಿಯಲ್ಲಿವೆ. ಎಡ ಭಾಗದಲ್ಲಿ ಇರಬೇಕಾದ ಹೃದಯ ಬಲ ಭಾಗದಲ್ಲಿದ್ದರೆ ಬಲ ಭಾಗದಲ್ಲಿ ಇರಬೇಕಾದ ಯಕೃತ ಮತ್ತು ಪಿತ್ತಕೋಶವು ಎಡಭಾಗದಲ್ಲಿದೆ.

ಸಾಂದರ್ಭಿಕ ಚಿತ್ರ

By

Published : Oct 3, 2019, 1:45 PM IST

Updated : Oct 3, 2019, 5:42 PM IST

ಕುಶಿನಗರ:ಮನುಷ್ಯರಿಗೆ ಸಾಮಾನ್ಯವಾಗಿ ಹೃದಯ ಎಡ ಭಾಗದಲ್ಲಿರುತ್ತದೆ. ಆದರೆ, ಉತ್ತರ ಪ್ರದೇಶದ ಯುವಕರೊಬ್ಬರಿಗೆ ಹೃದಯ ಎಡ ಭಾಗದಲ್ಲಿ ಇರುವ ಬದಲು ಬಲ ಭಾಗದಲ್ಲಿ ಇರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಕುಶಿನಗರದ ಪದ್ರೌನಾ ನಿವಾಸಿ ಜಮಾಲುದ್ದೀನ್ ಎಂಬುವವರು ಮೊದಲ ನೋಟದಲ್ಲಿ ಸಾಮಾನ್ಯವಾಗಿ ಕಾಣಿಸುತ್ತಾರೆ. ಆದರೆ, ಅವರು ವೈದ್ಯ ಲೋಕವನ್ನು ಒಂದು ಕ್ಷಣ ದಂಗಾಗುವಂತಹ ವಿಸ್ಮಯಗಳನ್ನು ತಮ್ಮ ದೇಹದಲ್ಲಿ ಇರಿಸಿಕೊಂಡಿದ್ದಾರೆ.

ಜಮಾಲುದ್ದೀನ್​ ಅವರ ದೇಹದ ಬಹುತೇಕ ಅಂಗಾಂಗಳು ತದ್ವಿರುದ್ಧ ಬದಿಯಲ್ಲಿವೆ. ಎಡ ಭಾಗದಲ್ಲಿ ಇರಬೇಕಾದ ಹೃದಯ ಬಲ ಭಾಗದಲ್ಲಿದ್ದರೆ ಬಲ ಭಾಗದಲ್ಲಿ ಇರಬೇಕಾದ ಯಕೃತ ಮತ್ತು ಪಿತ್ತಕೋಶವು ಎಡ ಭಾಗದಲ್ಲಿವೆ.

ಜಮಾಲುದ್ದೀನ್ ಹೊಟ್ಟೆ ನೋವೆಂದು ಬಳಲುತ್ತಿದ್ದರು. ಕುಟುಂಬಸ್ಥರು ಚಿಕಿತ್ಸೆ ಕೊಡಿಸಲು ಗೋರಖ್‌ಪುರದ ವೈದ್ಯರ ಬಳಿಗೆ ಕರೆದೊಯ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ಜಮಾಲುದ್ದೀನ್ ಅವರ ಎಕ್ಸರೆ ಮತ್ತು ಅಲ್ಟ್ರಾಸೌಂಡ್ ವರದಿಗಳನ್ನು ನೋಡಿ ವೈದ್ಯರು ಆಘಾತಕ್ಕೊಳಗಾಗಿದ್ದಾರೆ.

ಬಾರಿಯಾಟ್ರಿಕ್ ಲ್ಯಾಪರೊಸ್ಕೋಪಿಕ್ ಸರ್ಜನ್ ಆಗಿರುವ ಡಾ.ಶಶಿಕಾಂತ್ ದೀಕ್ಷಿತ್, ನಾವು ಅವರ ಪಿತ್ತಕೋಶದಲ್ಲಿ ಕಲ್ಲು ಇರುವುದನ್ನು ಪತ್ತೆ ಹಚ್ಚಿದ್ದೆವು. ಆದರೆ, ಪಿತ್ತಕೋಶವು ಎಡಭಾಗದಲ್ಲಿದ್ದರೆ ಕಲ್ಲುಗಳನ್ನು ತೆಗೆಯುವುದು ತುಂಬಾ ಕಷ್ಟ. ಶಸ್ತ್ರಚಿಕಿತ್ಸೆ ಮಾಡಲು ಮೂರು ಆಯಾಮದ ಲ್ಯಾಪರೊಸ್ಕೋಪಿಕ್ ಯಂತ್ರಗಳ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

1643ರಲ್ಲಿ ದೇಹದ ಅಂಗಾಂಗಗಳ ತಪ್ಪಾದ ಭಾಗದಲ್ಲಿರುವುದು ಪ್ರಥಮ ಬಾರಿಗೆ ಬೆಳಕಿಗೆ ಬಂದಿತ್ತು. ಇಂತಹ ವ್ಯಕ್ತಿಗಳ ಚಿಕಿತ್ಸೆ ಕಷ್ಟ ಸಾಧ್ಯ. ಅವರಿಗೆ ವಿಶೇಷವಾದ ಶಸ್ತ್ರಚಿಕಿತ್ಸೆಯ ಅಗತ್ಯ ಇರುತ್ತದೆ ಎನ್ನುತ್ತಾರೆ ಶಶಿಕಾಂತ್.

Last Updated : Oct 3, 2019, 5:42 PM IST

ABOUT THE AUTHOR

...view details