ಬಹ್ರೇಚ್(ಉತ್ತರ ಪ್ರದೇಶ): ಯುವಕನೊಬ್ಬನಿಗೆ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ ಕಾರಣ ಸ್ಥಳೀಯರು ಮಾರಣಾಂತಿಕವಾಗಿ ಥಳಿಸಿದ ಘಟನೆ ಬಹ್ರೇಚ್ ಜಿಲ್ಲೆಯ ಖೈರಿ ಡಿಕೋಲಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಯುವಕ ಮೃತಪಟ್ಟಿದ್ದಾನೆ.
ಸೊಹೆಲ್ (23) ಮೃತ ದುರ್ದೈವಿ. ಸೊಹೆಲ್ ತನ್ನ ಚಿಕ್ಕಪ್ಪನ ಮನೆಯ ಮುಂದೆ ಮೂತ್ರ ವಿಸರ್ಜನೆಗೆ ಎಂದು ತೆರಳಿದ್ದ. ಈ ವೇಳೆ, ಕ್ರೋಧಗೊಂಡ ನೆರೆಹೊರೆಯವರಾದ ರಾಮ್ ಮೂರತ್, ಆತ್ಮಾ ರಾಮ್, ರಾಂಪಾಲ್, ಸನೆಹಿ ಮತ್ತು ಮಂಜೀತ್ ಜೊತೆಗೆ ಕೆಲ ಮಂದಿ ಸೇರಿ ಕೋಲುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.