ಲಖನೌ(ಯುಪಿ): ದೇಶಾದ್ಯಂತ ಕೊರೊನಾ ರುದ್ರ ನರ್ತನ ಮಾಡುತ್ತಿದ್ದು, ಅದರ ವಿರುದ್ಧದ ಹೋರಾಟ ಮುಂದುವರಿದಿದೆ. ಇದರ ಮಧ್ಯೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ದೇಣಿಗೆ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದು, ಇದೀಗ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಶಾಸಕರು, ಎಂಎಲ್ಸಿಗಳ ಬಳಿ ಹಣದ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ತಿಂಗಳ ಸ್ಯಾಲರಿ, 1 ಕೋಟಿ ರೂ. ನೀಡುವಂತೆ MLAs, MLCsಗಳಿಗೆ ಯುಪಿ ಸಿಎಂ ಸೂಚನೆ! - ಕೋವಿಡ್-19
ಉತ್ತರಪ್ರದೇಶದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದ ಜನರಿಗೆ ಅಗತ್ಯ ವಸ್ತು ಒದಗಿಸುವ ಉದ್ದೇಶದಿಂದ ದೇಣಿಗೆ ನೀಡುವಂತೆ ಯೋಗಿ ಆದಿತ್ಯನಾಥ್ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
UP govt urges MLAs, MLCs to donate
ರಾಜ್ಯದ ಎಲ್ಲ ಶಾಸಕರು ಹಾಗೂ ಎಂಎಲ್ಸಿಗಳ ಬಳಿ ಮನವಿ ಮಾಡಿಕೊಂಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಂದು ತಿಂಗಳ ವೇತನ ಹಾಗೂ ಒಂದು ಕೋಟಿ ರೂ ದೇಣಿಗೆ ನೀಡುವಂತೆ ಸೂಚನೆ ನೀಡಿದ್ದಾರೆ. ಇದರ ಜತೆಗೆ ರಾಜ್ಯದಲ್ಲಿನ ಉದ್ಯಮಿಗಳ ಬಳಿ ಕೂಡ ಮನವಿ ಮಾಡಿರುವ ಯೋಗಿ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವಂತೆ ಸೂಚನೆ ನೀಡಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೆ ಮುಖ್ಯಮಂತ್ರಿ ಯೋಗಿ ಧನ್ಯವಾದ ತಿಳಿಸಿದ್ದಾರೆ. ಸದ್ಯ ರಾಜ್ಯದಲ್ಲಿ 400 ಶಾಸಕರು ಹಾಗೂ 99 ಎಂಎಲ್ಸಿಗಳಿದ್ದಾರೆ.