ಕರ್ನಾಟಕ

karnataka

ETV Bharat / bharat

ಯೋಗಿ ಸರ್ಕಾರದ ಮಹತ್ವದ ನಿರ್ಧಾರ: ಸರ್ಕಾರಿ ಬಸ್​ಗಳಿಗೆ ಮಹಿಳಾ ಡ್ರೈವರ್​​ಗಳ​ ನೇಮಕ!

ಉತ್ತರಪ್ರದೇಶದಲ್ಲಿ ಸಂಚರಿಸುವ ಬಸ್​ಗಳಲ್ಲಿ ಇನ್ಮುಂದೆ ಮಹಿಳಾ ಡ್ರೈವರ್​ಗಳು ಸೇವೆ ಸಲ್ಲಿಸಲಿದ್ದು, ಅದಕ್ಕಾಗಿ ನಾಳೆ ಡ್ರೈವಿಂಗ್​ ಟೆಸ್ಟ್​ ನಡೆಸಲು ನಿರ್ಧರಿಸಲಾಗಿದೆ

women as bus drivers
women as bus drivers

By

Published : Aug 20, 2020, 8:19 PM IST

ಗಾಜಿಯಾಬಾದ್​:ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರವು ಉತ್ತರಪ್ರದೇಶದಲ್ಲಿ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಸರ್ಕಾರಿ ಬಸ್​ಗಳಲ್ಲಿ ಚಾಲಕಿಯರನ್ನು​ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಸಂಚರಿಸುವ ಬಸ್​ಗಳಿಗಾಗಿ ಚಾಲಕಿಯರನ್ನು ನೇಮಕ ಮಾಡಿಕೊಳ್ಳಲು ಕೌಶಂಬಿಯಲ್ಲಿ ನಾಳೆ ಡ್ರೈವಿಂಗ್​​ ಟೆಸ್ಟ್​​ ನಡೆಯಲಿದೆ. ಇಲ್ಲಿ ಆಯ್ಕೆಯಾಗುವ ಮಹಿಳೆಯರು ಮೊದಲು ಗಾಜಿಯಾಬಾದ್​ನ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುವ ಬಸ್​ಗಳಲ್ಲಿ ಡ್ರೈವರ್​ ಆಗಿ ಸೇವೆ ಸಲ್ಲಿಸಲಿದ್ದಾರೆ.

ಇದೇ ವಿಷಯವಾಗಿ ಈಟಿವಿ ಭಾರತ ಜತೆ ಮಾತನಾಡಿರುವ ಗಾಜಿಯಾಬಾದ್​ ಬಸ್​ ಡಿಪೋ ಮ್ಯಾನೇಜರ್​, ಇದೇ ಮೊದಲ ಬಾರಿಗೆ ಇಂತಹ ಯೋಜನೆ ಜಾರಿಗೊಳಿಸಲು ನಾವು ಮುಂದಾಗಿದ್ದೇವೆ ಎಂದಿದ್ದಾರೆ. ನಿರ್ಭಯಾ ಫಂಡ್​​ನಲ್ಲಿ ಖರೀದಿ ಮಾಡಲಾಗಿರುವ ಬಸ್​ಗಳ ಡ್ರೈವರ್​ಗಳಾಗಿ ಮಹಿಳೆಯರು ನೇಮಕಗೊಳ್ಳಲಿದ್ದು, ಬಸ್​ ಡ್ರೈವಿಂಗ್​​ ವೇಳೆ ಎಲ್ಲ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details