ಕರ್ನಾಟಕ

karnataka

ETV Bharat / bharat

ಕಿರುಕುಳ ನೀಡಿದ್ದಕ್ಕೆ ಆಕ್ಷೇಪ: ಬಾಲಕಿಯನ್ನು ಕಟ್ಟಡದ ಮೇಲಿಂದ ಎಸೆದ ಕಿರಾತಕರು - ಮೌ ಪ್ರದೇಶದಲ್ಲಿ 15 ವರ್ಷದ ಬಾಲಕಿಗೆ ಕಿರುಕುಳ

ತನಗೆ ಕಿರುಕುಳ ನೀಡುತ್ತಿದ್ದವರನ್ನು ವಿರೋಧಿಸಿದ ಬಾಲಕಿಯನ್ನು ಮೂವರು ಕೀಚಕರು ಕಟ್ಟಡದ ಟೆರೇಸ್‌ನಿಂದ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

UP girl thrown off terrace by 3 men
ಬಾಲಕಿಯನ್ನು ಕಟ್ಟದ ಮೇಲಿಂದ ಎಸೆದ ವ್ಯಕ್ತಿಗಳು

By

Published : Oct 25, 2020, 7:14 AM IST

ಮೌ (ಉತ್ತರ ಪ್ರದೇಶ):ಕಿರುಕುಳದ ವಿರುದ್ಧ ದನಿ ಎತ್ತಿದ 15 ವರ್ಷದ ಬಾಲಕಿಯನ್ನು ಮೂವರು ಕಿರಾತಕರು ಕಟ್ಟಡದ ಮೇಲಿಂದ ಎಸೆದಿರುವ ಘಟನೆ ಮೌ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೀಲ್, ಜುನೈದ್ ಮತ್ತು ಅವರ ಇನ್ನೊಬ್ಬ ಸ್ನೇಹಿತ ಬಾಲಕಿಯನ್ನು ಬಲವಂತವಾಗಿ ಕಟ್ಟಡದ ಟೆರೇಸ್‌ಗೆ ಕರೆದೊಯ್ದು ಕಿರುಕುಳ ನೀಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಕೆಯನ್ನು ಕಟ್ಟಡದ ಮೇಲ್ಛಾವಣಿಯಿಂದ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳು ನನ್ನನ್ನು ಥಳಿಸಿದ್ದಾರೆ ಎಂದು ಪೊಲೀಸರಿಗೆ ಬಾಲಕಿ ತಿಳಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಅಜಮ್‌ಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೌ ಎಸ್‌ ಪಿ ಸುಶೀಲ್ ಧುಲೆ ತಿಳಿಸಿದ್ದಾರೆ.

ಬಾಲಕಿಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details