ದೇವಾರಿಯಾ(ಉತ್ತರಪ್ರದೇಶ):ದೂರು ನೀಡಲು ಠಾಣೆಗೆ ಬಂದ ಯುವತಿಯರ ಎದುರೇ ಪೊಲೀಸ್ ಅಧಿಕಾರಿಯೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ನಡೆದಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲು ಮಾಡಿದ್ದಾಳೆ.
ಭೂಮಿ ವಿವಾದ ವಿಚಾರವಾಗಿ ದೂರು ದಾಖಲು ಮಾಡಲು ತಾಯಿ-ಮಗಳು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಭೀಷ್ಮಪಾಲ್ ಸಿಂಹ ಹಸ್ತಮೈಥುನ ಮಾಡಿಕೊಂಡಿದ್ದು, ಅದರ ವಿಡಿಯೋ ಮೊಬೈಲ್ನಲ್ಲಿ ಮಹಿಳೆ ಸೆರೆ ಹಿಡಿದಿದ್ದಾಳೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಗಾಗಲೇ ಆತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದ್ದು, ಪೊಲೀಸ್ ಅಧಿಕಾರಿ ತಲೆಮರೆಸಿಕೊಂಡಿದ್ದಾನೆ. ಆತನ ಹುಡುಕಿಕೊಟ್ಟವರಿಗೆ 25 ಸಾವಿರ ರೂ ನಗದು ಬಹುಮಾನ ಸಹ ಘೋಷಣೆ ಮಾಡಲಾಗಿದೆ.