ನೋಯ್ಡಾ:ಆತನೊಬ್ಬ ಗ್ಯಾಂಗ್ಸ್ಟರ್. ಆಕೆ ಹೆಸರು ಮಾಡಿರುವ ಪೊಲೀಸ್ ಅಧಿಕಾರಿ. ಆದರೆ ಗ್ಯಾಂಗ್ಸ್ಟರ್ ನೋಟಕ್ಕೆ ಫಿದಾ ಆದ ಅಧಿಕಾರಿಣಿ ಮದುವೆ ಮಾಡಿಕೊಂಡಿರುವ ಘಟನೆ ಈಗ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ.
ಹೌದು, ಈ ಘಟನೆ ನಡೆದಿದ್ದು ಉತ್ತರಪ್ರದೇಶದ ನೋಯ್ಡಾದಲ್ಲಿ. 2014ರಲ್ಲಿ 30 ವರ್ಷದ ಗ್ಯಾಂಗ್ಸ್ಟರ್ ರಾಹುಲ್ ಥರಾಸನಾ ಎಂಬಾತನನ್ನು ಮನ್ಮೋಹನ್ ಗೋಯಲ್ ಎಂಬಾತನ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು. 2014 ಮೇ 9ರಂದು ಪೊಲೀಸ್ ಅಧಿಕಾರಿ ಪಾಯಲ್ ಆರೋಪಿ ರಾಹುಲ್ನನ್ನು ಸೂರಜ್ಪೂರ್ ಕೋರ್ಟ್ಗೆ ಕರೆದುಕೊಂಡು ಹೋಗುವಾಗ ಅವರ ಮೊದಲ ಭೇಟಿಯಾಗಿತ್ತಂತೆ.
ಗ್ಯಾಂಗ್ಸ್ಟರ್ನ ಮೊದಲ ನೋಟದಲ್ಲೇ ಪಾಯಲ್ ಮನಸೋತಿದ್ದರಂತೆ. ಜೈಲಿನ ಹೊರಗೆ, ಒಳಗೆ ರಾಹುಲ್ ಇದ್ದರು ಯೋಗಕ್ಷೇಮ ವಿಚಾರಿಸುತ್ತಿದ್ದರಂತೆ. ಹೀಗೆ ಅವರ ಪ್ರೇಮ ಶುರುವಾಗಿದ್ದು, ಈ ಜೋಡಿ ಈಗ ಮದುವೆಯಾಗಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇವರಿಬ್ಬರು ಮದುವೆಯಾಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಇನ್ನು ಈ ವಿಷಯ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದ್ರೆ ಆ ಫೋಟೋದಲ್ಲಿರುವ ಮಹಿಳೆ ಪೊಲೀಸ್ ಅಧಿಕಾರಿ ಪಾಯಲ್ ಹೌದೋ, ಅಲ್ವೋ ಎಂಬುದು ತಿಳಿಯಬೇಕಾಗಿದೆ. ಒಂದು ವೇಳೆ ಅದು ಪೊಲೀಸ್ ಅಧಿಕಾರಿಣಿ ಆಗಿದ್ರೆ ಕಠಿಣ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.