ಲಖನೌ (ಉತ್ತರಪ್ರದೇಶ) :ನಟೋರಿಯಸ್ ರೌಡಿ ವಿಕಾಸ್ ದುಬೆ ಆರ್ಭಟಕ್ಕೆ ಉತ್ತರಪ್ರದೇಶವು ಬೆಚ್ಚಿದೆ. ಪಾತಕಿಯನ್ನು ಬಂಧಿಸಲು 25ಕ್ಕೂ ಅಧಿಕ ತಂಡಗಳನ್ನು ರಚಿಸಲಾಗಿದೆ. ಡಿಎಸ್‌ಪಿ ಸೇರಿ 8 ಪೊಲೀಸರನ್ನು ಕೊಂದು ಪರಾರಿಯಾಗಿ 36 ಗಂಟೆಗಳು ಕಳೆದರೂ ಆತನನ್ನು ಇನ್ನೂ ಬಂಧಿಸಿಲ್ಲ.
ವಿಕಾಸ್ ದುಬೆಯೊಂದಿಗೆ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಕಣ್ಗಾವಲು ತಂಡವು ವಿಕಾಸ್ ದುಬೆಯೊಂದಿಗೆ ಸಂಪರ್ಕ ಹೊಂದಿದ್ದ ಕೆಲವು ಪೊಲೀಸರನ್ನು ಕರೆಗಳ ಆಧಾರದ ಮೇಲೆ ಕಂಡು ಹಿಡಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.