ಕರ್ನಾಟಕ

karnataka

ETV Bharat / bharat

ಸ್ವಾತಂತ್ರ್ಯ ಹೋರಾಟಗಾರರ ಕನಸು ಮೋದಿಯಿಂದ ಪರಿಪೂರ್ಣ : ಯೋಗಿ ಆದಿತ್ಯನಾಥ್​ - ಉತ್ತರ ಪ್ರದೇಶ

ಜಮ್ಮು-ಕಾಶ್ಮೀರ ಪುನರ್​ರಚನೆ ಮಸೂದೆ ಲೋಕಸಭೆಯಲ್ಲಿ ಇಂದು ಅಂಗೀಕಾರಗೊಂಡಿದೆ. ಇನ್ಮುಂದೆ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಲಿದೆ. ಇನ್ನು ಮೋದಿ ಸರ್ಕಾರದ ಈ ಐತಿಹಾಸಿಕ ನಿರ್ಧಾರದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರತಿಕ್ರಿಯೆ ನೀಡಿದ್ದಾರೆ.

ಯೋಗಿ ಆದಿತ್ಯನಾಥ್​

By

Published : Aug 6, 2019, 11:16 PM IST

ಉತ್ತರ ಪ್ರದೇಶ: ಆರ್ಟಿಕಲ್​ 370 ರದ್ದಾದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಮೋದಿ ಮತ್ತು ಅಮಿತ್​ ಶಾರ ಬೆನ್ನು ತಟ್ಟಿದ್ದಾರೆ.

ಒಂದೇ ಭಾರತ ಎನ್ನುವ ಭಾರತ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸನ್ನು ಇಂದು ದೇಶದ ಪ್ರಾಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಮಾಡಿ ತೋರಿಸಿದ್ದಾರೆ. ಹೀಗಾಗಿ ಭಾರತ ಸರ್ಕಾರ, ಜಮ್ಮು-ಕಾಶ್ಮೀರ ಹಾಗೂ ಲಡಾಖ್​ ನಿವಾಸಿಗಳನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಇಂದು ಲೋಕಸಭೆಯಲ್ಲೂ ಆರ್ಟಿಕಲ್​​ 370 ರದ್ದತಿ ಮಸೂದೆ ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details