ಲಖನೌ: ರಾಜ್ಯದಲ್ಲಿ ನಡೆದ ಕಾಮಗಾರಿಯ ಶಂಕುಸ್ಥಾಪನೆ ನಾಮಫಲಕದಲ್ಲಿ ತಮ್ಮ ಹೆಸರು ಯಾಕೆ ಹಾಕಿಲ್ಲ ಎಂಬ ಬಗ್ಗೆ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾದ ಮುಂದೆ ಜಗಳಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪರಸ್ಪರ ಮಾತಿಗೆ ಮಾತು ಬೆಳೆದು ಇಬ್ಬರು ಬಿಜೆಪಿ ಮುಖಂಡರು ಪಾರ್ಟಿ ಮೀಟಿಂಗ್ ಹಾಲ್ನಲ್ಲೇ ಶೂನಿಂದ ಹೊಡೆದಾಡಿಕೊಂಡಿರುವ ಘಟನೆ ಶಾಂತ್ ಕಬೀರ್ ನಗರದಲ್ಲಿ ನಡೆದಿದೆ.
ಮೀಟಿಂಗ್ನಲ್ಲೇ ಶೂನಿಂದ ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ ಸಂಸದ-ಶಾಸಕ! - ಲಖನೌ
ಉತ್ತರಪ್ರದೇಶದ ಶಾಂತಿ ಕಭೀರ್ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮೀಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಸಂಸದ ಶರದ್ ತ್ರಿಪಾಠಿ ಹಾಗೂ ಬಿಜೆಪಿ ಎಂಎಲ್ಎ ರಾಕೇಶ್ ಸಿಂಗ್ ಸಭೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.
ಉತ್ತರಪ್ರದೇಶದ ಶಾಂತಿ ಕಭೀರ್ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮೀಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಸಂಸದ ಶರದ್ ತ್ರಿಪಾಠಿ ಹಾಗೂ ಬಿಜೆಪಿ ಎಂಎಲ್ಎ ರಾಕೇಶ್ ಸಿಂಗ್ ಸಭೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡು ಒಬ್ಬರ ಮೇಲೆ ಮತ್ತೊಬ್ಬರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸಂಸದ ಶರದ್ ತ್ರಿಪಾಠಿ, ಎಂಎಲ್ಎ ರಾಕೇಶ್ ಮೇಲೆ ಶೂನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಫೈಟ್ ಕೂಡ ನಡೆದಿದೆ. ಆ ವಿಡಿಯೋ ಈಗ ವೈರಲ್ ಆಗಿದೆ. ಸಂಸದ ಹಾಗೂ ಶಾಸಕರ ಈ ವರ್ತನೆ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿಪಕ್ಷಗಳು ಈ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.