ಲಖನೌ :ಉತ್ತರಪ್ರದೇಶದ ಸಹಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕಗಳೊಂದಿಗೆ ಅಗ್ರಸ್ಥಾನ ಪಡೆದ ಧರ್ಮೇಂದ್ರ ಪಟೇಲ್ಗೆ ಭಾರತದ ರಾಷ್ಟ್ರಪತಿ ಯಾರು ಎಂಬುದೇ ತಿಳಿದಿಲ್ಲ.
ಯುಪಿಯ ಶಿಕ್ಷಣ ಇಲಾಖೆ 69,000 ಹುದ್ದೆಗಳಿಗೆ ನೇಮಕಾತಿ ನಡೆಸಿತ್ತು. ಉದ್ಯೋಗ ಆಕಾಂಕ್ಷಿಗಳಿಂದ ಲಕ್ಷಾಂತರ ರೂ. ಲಂಚ ಸ್ವೀಕರಿಸುವ ಆರೋಪದಲ್ಲಿ ಪ್ರಯಾಗ್ರಾಜ್ ಪೊಲೀಸರು ಭಾನುವಾರ ಅಗ್ರಸ್ಥಾನ ಪಡೆದ ಧರ್ಮೇಂದ್ರ ಪಟೇಲ್ ಹಾಗೂ ಇತರ 9 ಮಂದಿಯನ್ನು ಬಂಧಿಸಿದ ನಂತರ ಈತನ ಸಾಮಾನ್ಯ ಜ್ಞಾನದ ಕೊರತೆ ಬೆಳಕಿಗೆ ಬಂದಿದೆ. ನೇಮಕಾತಿಯಲ್ಲಿ ಅಗ್ರಸ್ಥಾನದಲ್ಲಿ ಪಡೆದಿದ್ದ ಪ್ರಯಾಗರಾಜ್ ನಿವಾಸಿ ಧರ್ಮೇಂದ್ರ ಪಟೇಲ್ ಸಾಮಾನ್ಯ ಜ್ಞಾನದ ತಿಳುವಳಿಕೆ ಮಟ್ಟ ಇಡೀ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆ ಎತ್ತಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಇತರ ಮೂವರು ಅಭ್ಯರ್ಥಿಗಳನ್ನೂ ಬಂಧಿಸಲಾಗಿದೆ.