ಶ್ರೀನಗರ :ಯೋಧನೋರ್ವ ನಾಪತ್ತೆಯಾಗಿ ಒಂದು ವಾರದ ಬಳಿಕ ಆಡಿಯೋ ಸಂದೇಶವೊಂದು ಸಿಕ್ಕಿದೆ. ಇನ್ನೂ ಪರಿಶೀಲನೆ ನಡೆಸದ ಆ ಆಡಿಯೋ ಸಂದೇಶದಲ್ಲಿ ಉಗ್ರನೋರ್ವ ಯೋಧನನ್ನು ಅಪಹರಿಸಿ ಕೊಲೆ ಮಾಡಿದ್ದೇವೆ ಎಂದು ಹೇಳಿರುವುದು ಕೇಳಿ ಬರುತ್ತದೆ.
ಯೋಧ ನಾಪತ್ತೆ ಪ್ರಕರಣ ; ಅಪಹರಿಸಿ ಕೊಲೆ ಮಾಡಿರುವುದಾಗಿ ಆಡಿಯೋ ಸಂದೇಶ - ಶೋಪಿಯಾನ್ ಯೋಧ ನಾಪತ್ತೆ
ಕರ್ತವ್ಯಕ್ಕೆ ಹಿಂದಿರುಗುವ ವೇಳೆ ಅವರ ಕಾರನ್ನು ತಡೆದು ಉಗ್ರರು ಅಪಹರಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ಶುಕ್ರವಾರ ಸೈನಿಕನ ಬಟ್ಟೆಗಳು ಸೇಬಿನ ತೋಟದಲ್ಲಿ ಪತ್ತೆಯಾಗಿತ್ತು..
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಪ್ರಾದೇಶಿಕ ಸೇನೆಯ (ಟಿಎ) ಯೋಧನೊಬ್ಬ ನಾಪತ್ತೆಯಾಗಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅವರ ಕಾರು ಪತ್ತೆಯಾಗಿತ್ತು. ಈದ್ ಪ್ರಯುಕ್ತ ಯೋಧ ಶಕೀರ್ ಮಂಜೂರ್ ರಜೆ ಮೇಲೆ ಶೋಪಿಯಾನ್ ಜಿಲ್ಲೆಯ ರಿಷಿಪೋರಾದಲ್ಲಿರುವ ತಮ್ಮ ಮನೆಗೆ ತೆರಳಿದ್ದರು.
ಕರ್ತವ್ಯಕ್ಕೆ ಹಿಂದಿರುಗುವ ವೇಳೆ ಅವರ ಕಾರನ್ನು ತಡೆದು ಉಗ್ರರು ಅಪಹರಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ಶುಕ್ರವಾರ ಸೈನಿಕನ ಬಟ್ಟೆಗಳು ಸೇಬಿನ ತೋಟದಲ್ಲಿ ಪತ್ತೆಯಾಗಿತ್ತು. ಬಳಿಕ ಭದ್ರತಾ ಪಡೆಗಳು ತಮ್ಮ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದವು.