ಕರ್ನಾಟಕ

karnataka

ETV Bharat / bharat

ಸಾಲ ವಂಚಕರ ಬಗ್ಗೆ ರಾಹುಲ್ ಪ್ರಶ್ನೆ.. ಬಿಜೆಪಿ ಉತ್ತರಕ್ಕೆ ರಾಗಾ ಕಿಡಿ - ಲೋಕಸಭೆಯಲ್ಲಿ ರಾಹುಲ್ ಪ್ರಶ್ನೆ

ಬ್ಯಾಂಕ್​​ಗಳಿಗೆ ಸಾಲ ವಾಪಸ್ ನೀಡದವರ ಕುರಿತು ರಾಹುಲ್ ಕೇಳಿದ್ದ ಪ್ರಶ್ನೆಗೆ ಹಣಕಾಸು ಇಲಾಖೆ ಸಹಾಯಕ ಸಚಿವ ಅನುರಾಗ್ ಠಾಕೂರ್ ನೀಡಿದ ಪ್ರತಿಕ್ರಿಯೆಗೆ ಕಾಂಗ್ರೆಸ್ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Unsatisfied with govt response on bank defaulters,ಸಾಲ ವಂಚಕರ ಬಗ್ಗೆ ರಾಹುಲ್ ಪ್ರಶ್ನೆ
ಸಾಲ ವಂಚಕರ ಬಗ್ಗೆ ರಾಹುಲ್ ಪ್ರಶ್ನೆ

By

Published : Mar 16, 2020, 3:52 PM IST

ನವದೆಹಲಿ: ಉದ್ದೇಶಪೂರ್ವಕ ಸಾಲ ವಂಚಕರ ಬಗ್ಗೆ ಕೇಳಿದ್ದ ಪ್ರಶ್ನೆ ಕುರಿತು ಲೋಕಸಭೆಯಲ್ಲಿ ಹಣಕಾಸು ಇಲಾಖೆ ಸಹಾಯಕ ಸಚಿವ ಅನುರಾಗ್ ಠಾಕೂರ್ ನೀಡಿದ ಪ್ರತಿಕ್ರಿಯೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸತ್​ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್ ಗಾಂಧಿ, 'ಬ್ಯಾಂಕ್​​ಗಳಿಗೆ ಸಾಲ ವಾಪಸ್ ನೀಡದ 500 ಜನರ ಹೆಸರುಗಳ ಬಗ್ಗೆ ಸರಳವಾದ ಪ್ರಶ್ನೆಯನ್ನು ಕೇಳಿದ್ದೆ. ಆದರೆ ನನಗೆ ಸ್ಪಷ್ಟ ಉತ್ತರವನ್ನು ನೀಡಲಾಗಿಲ್ಲ. ಪೂರಕ ಪ್ರಶ್ನೆ ಕೇಳುವುದು ಸಂಸತ್ ಸದಸ್ಯನ ಹಕ್ಕು. ಆದರೆ ಸ್ಪೀಕರ್ ನನಗೆ ಅವಕಾಶ ನೀಡಲಿಲ್ಲ. ಇದು ನನಗೆ ನನಗೆ ನೋವುಂಟು ಮಾಡಿದೆ ಎಂದಿದ್ದಾರೆ.

ಲಿಖಿತ ಪ್ರಶ್ನೆಯೊಂದರಲ್ಲಿ, ರಾಹುಲ್ ಗಾಂಧಿಯವರು ಸಾಲ ವಾಪಸ್ ಮಾಡದವರ ಹೆಸರುಗಳು ಮತ್ತು ಅವರಿಂದ ಸಾಲವನ್ನು ವಾಪಸ್ ಪಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್, ಸಾಲ ವಾಪಸ್ ನೀಡದವರ ಪಟ್ಟಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಮರೆಮಾಡಲು ಏನೂ ಇಲ್ಲ. ಎಲ್ಲರೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಣವನ್ನು ತೆಗೆದುಕೊಂಡರು. ಈ ಪ್ರಶ್ನೆ ಕೇಳಿದ ಸದನದ ಹಿರಿಯ ಸದಸ್ಯರಿಗೆ ವಿಷಯದ ಬಗ್ಗೆ ಅವರಿಗಿರುವ ತಿಳಿವಳಿಕೆಯ ಕೊರತೆಯನ್ನು ತೋರಿಸುತ್ತದೆ ಎಂದಿದ್ದಾರೆ.

ಸಾಲ ವಾಪಸ್ ನೀಡದವರನ್ನು ಸರ್ಕಾರ ಏಕೆ ಸಮರ್ಥಿಸಿಕೊಳ್ಳುತ್ತಿದೆ? ಸಂಸತ್ತಿನಲ್ಲಿ ಅವರ ಹೆಸರನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ABOUT THE AUTHOR

...view details