ಉನ್ನಾವೋ(ಯುಪಿ):ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಮಹಿಳೆ ಕೋರ್ಟಿಗೆ ಹೋಗುತ್ತಿದ್ದಾಗ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಆಕೆಯ ದೇಹ ಶೇ. 90ರಷ್ಟು ಸುಟ್ಟ ನಂತರವೂ ಸಹಾಯಕ್ಕಾಗಿ ಸುಮಾರು ಒಂದು ಕಿಲೋ ಮೀಟರ್ ಓಡಿ ಹೋಗಿದ್ದಾಳೆ ಎಂಬುದು ಇದೀಗ ತಿಳಿದು ಬಂದಿದೆ.
ಬೆಂಕಿ ಹಚ್ಚಿ ಅತ್ಯಾಚಾರ ಸಂತ್ರಸ್ತೆ ಕೊಲೆಗೆ ಯತ್ನ... ಸಹಾಯ ಬೇಡಿ 1 ಕಿ.ಮೀ. ಓಡಿದ ಮಹಿಳೆ! - ಬೆಂಕಿ ಹಚ್ಚಿನ ನಂತರ 1 ಕಿ.ಮೀ ಓಟ
ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಕೋರ್ಟ್ಗೆ ಆಗಮಿಸುತ್ತಿದ್ದ ವೇಳೆ ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡುವ ಯತ್ನ ನಡೆದಿದ್ದು, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಸಂತ್ರಸ್ತೆಯನ್ನ ದೆಹಲಿಗೆ ಶಿಫ್ಟ್ ಮಾಡಲಾಗಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸಂತ್ರಸ್ತೆ ಕಾಪಾಡಿ ಕಾಪಾಡಿ ಎಂದು ಕೂಗಿ ಓಡಿ ಹೋಗಿದ್ದಾಳೆ. ಆದರೆ ಆಕೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಯಾರು ಆಕೆಯ ಸಹಾಯಕ್ಕಾಗಿ ಮುಂದೆ ಹೋಗಿಲ್ಲ ಎಂದು ತಿಳಿದು ಬಂದಿದೆ. ಜತೆಗೆ ಆಕೆ ಓರ್ವ ಮಾಟಗಾತಿ ಎಂದು ನಾವು ಬಾವಿಸಿದ್ದೆವು ಎಂದು ಕೆಲವರು ಹೇಳಿದ್ದಾರೆ.
ಶೇ. 90ರಷ್ಟು ಸುಟ್ಟ ಬಳಿಕ ಸಹ ಆಕೆ ಸ್ವತಃ ಪೊಲೀಸರಿಗೆ ಕಾಲ್ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ಪ್ರಕಾಶ್ ಹೇಳಿದ್ದಾರೆ. ಸಾಮೂಹಿಕ ಅತ್ಯಾಚಾರದ ಬಗ್ಗೆ ಸಂತ್ರಸ್ತೆ ಮಾರ್ಚ್ ತಿಂಗಳಲ್ಲಿ ಕೋರ್ಟ್ ಮೆಟ್ಟಿಲೇರಿದ್ದಳು. ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಶಿಫ್ಟ್ ಮಾಡಲಾಗಿದೆ.