ಕರ್ನಾಟಕ

karnataka

ETV Bharat / bharat

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕಾರಿಗೆ ಅಪಘಾತ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ - IPC section 302, 307, 506 and 120-B pertaining to murder

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡಿದ್ದ ಪರಿಣಾಮ ಸಂತ್ರಸ್ತೆ ಪರಿಸ್ಥಿತಿ ಗಂಭೀರವಾಗಿದೆ.

Unnao rape victim's accident

By

Published : Jul 29, 2019, 7:48 PM IST

Updated : Jul 29, 2019, 8:10 PM IST

ರಾಯಬರೇಲಿ: ಉತ್ತರಪ್ರದೇಶದ ರಾಯಬರೇಲಿಯಲ್ಲಿನ ಉನ್ನಾವೋ ರೇಪ್​​ ಪ್ರಕರಣದ ಸಂತ್ರಸ್ತೆಗೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್​ ಸಿಂಗ್ ಮತ್ತು ಆತನ ಸಹೋದರ ಮನೋಜ್​ ಸಿಂಗ್​ ಸೆನಗಾರ್​ ಸೇರಿ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆ ಚಿಕ್ಕಪ್ಪ ಮಹೇಶ್​ ಸಿಂಗ್ ಅವರು ಐಪಿಸಿ ಸೆಕ್ಷನ್​ 302 (ಕೊಲೆಗೆ ದಂಡ), 307 (ಕೊಲೆ ಯತ್ನ), 506 (ಕೊಲೆ ಬೆದರಿಕೆ) ಮತ್ತು 120–'ಬಿ' (ಅಪರಾಧಿಕ ಒಳಸಂಚು) ಅಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆ ತಾಯಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾರೆ. ಕುಲದೀಪ್​ ಸಿಂಗ್​ ಸಂತ್ರಸ್ತೆಯ ಕುಟುಂಬವನ್ನು ಕೊಲೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣದಲ್ಲಿ ಜೈಲು ಸೇರಿರುವ ಚಿಕ್ಕಪ್ಪನನ್ನು ನೋಡಲೆಂದು ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಸಂಬಂಧಿಕರಿಬ್ಬರು ಮೃತಪಟ್ಟಿದ್ದು, ಅದರಲ್ಲಿ ಒಬ್ಬರು ಉನ್ನಾವೋ ಪ್ರಕರಣದ ಸಾಕ್ಷಿಯಾಗಿದ್ದರು. ಅದೃಷ್ಟವಶಾತ್​ ವಕೀಲರು ಬದುಕುಳಿದಿದ್ದರು.
Last Updated : Jul 29, 2019, 8:10 PM IST

ABOUT THE AUTHOR

...view details