ಉನ್ನಾವೊ: ಉತ್ತರಪ್ರದೇಶದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸೇರಿದಂತೆ ಇತರೆ ಒಟ್ಟು ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಉನ್ನಾವ್ ಎಸ್‌ಎಸ್‌ಪಿ ಆದೇಶದ ಮೇರೆಗೆ ಬಿಹಾರ ಪೊಲೀಸ್ ಠಾಣೆ ಎಸ್‌ಎಚ್‌ಒ, ಇಬ್ಬರು ಸಹಾಯಕ ಸಬ್ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.ಉನ್ನಾವ್ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ಶವವನ್ನು ಭಾನುವಾರ ಮಧ್ಯಾಹ್ನ ಹಿಂದೂಪುರ ಗ್ರಾಮದ ಹೊರವಲಯದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.