ಕರ್ನಾಟಕ

karnataka

ETV Bharat / bharat

ಅನ್​ಲಾಕ್​ 5.0 ಗೈಡ್​ಲೈನ್ಸ್​ ರಿಲೀಸ್​​: ಚಿತ್ರಮಂದಿರ, ಮಲ್ಟಿಪ್ಲೆಕ್ಸ್​, ಈಜುಕೊಳ ಓಪನ್​! - Unlock 5 guidelines news

ದೇಶಾದ್ಯಂತ ನಾಳೆಯಿಂದ ಅನ್​ಲಾಕ್​​ 5.0 ಜಾರಿಗೊಳ್ಳಲಿದ್ದು, ಕೇಂದ್ರ ಗೃಹ ಸಚಿವಾಲಯ ಮತ್ತಷ್ಟು ಸಡಲಿಕೆ ನೀಡಿ ಆದೇಶ ಹೊರಹಾಕಿದೆ.

Unlock 5 guidelines
Unlock 5 guidelines

By

Published : Sep 30, 2020, 8:53 PM IST

ನವದೆಹಲಿ:ಮಹಾಮಾರಿ ಕೊರೊನಾ ವೈರಸ್​ ಹಾವಳಿ ನಡುವೆ ದೇಶಾದ್ಯಂತ ನಾಳೆಯಿಂದ ಅನ್​ಲಾಕ್​​ 5.0 ಜಾರಿಗೊಳ್ಳಲಿದ್ದು, ಕೇಂದ್ರ ಗೃಹ ಸಚಿವಾಲಯ ದೇಶದ ಜನರಿಗೆ ಮತ್ತಷ್ಟು ಸಡಲಿಕೆ ನೀಡಿ ಇದೀಗ ಆದೇಶ ಹೊರಹಾಕಿದೆ.

ಚಿತ್ರಮಂದಿರ, ಮಲ್ಟಿಪ್ಲೆಕ್ಸ್​, ಈಜುಕೊಳ ಓಪನ್​

ಪ್ರಮುಖವಾಗಿ ಅಕ್ಟೋಬರ್​​ 15ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್​​ಗಳು, ಈಜುಕೊಳ ಭಾಗಶಃ ಓಪನ್​ ಮಾಡಲು ಗ್ರೀನ್​ ಸಿಗ್ನಲ್​ ನೀಡಲಾಗಿದ್ದು, ಶೇ. 50ರಷ್ಟು ಪ್ರೇಕ್ಷಕರಿಗೆ ಸಿನಿಮಾ ಹಾಲ್​ಗಳಲ್ಲಿ ಅವಕಾಶವಿದೆ. ಪ್ರಮುಖವಾಗಿ ಕಂಟೇನ್ಮೆಂಟ್​​ ವಲಯಗಳಲ್ಲಿ ಲಾಕ್​ಡೌನ್​ ಮುಂದುವರೆಯಲಿದೆ. ಸಾರ್ವಜನಿಕ ಸಮಾರಂಭಗಳಲ್ಲಿ 100ಕ್ಕಿಂತಲೂ ಅಧಿಕ ಜನರು ಸೇರಲು ಅವಕಾಶ ನೀಡಲಾಗಿದೆ.

ಚಿತ್ರಮಂದಿರ, ಮನೋರಂಜನಾ ಪಾರ್ಕ್‌ಗಳಲ್ಲಿ ಭಾಗಿಯಾಗುವಾಗ ಕೊರೊನಾ ಮಾರ್ಗಸೂಚಿಗಳ ಪಾಲನೆ ಕಡ್ಡಾಯವಾಗಿದ್ದು, ಅಕ್ಟೋಬರ್ 15ರಿಂದ ಶಾಲಾ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಲಾಗಿದ್ದು, ಅದಾಗ್ಯೂ ಅಂತಿಮ ತೀರ್ಮಾನವನ್ನು ಆಯಾ ರಾಜ್ಯ ಸರ್ಕಾರಗಳೇ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ಶಾಲೆ ತೆರೆಯುವ ನಿರ್ಧಾರ ರಾಜ್ಯಗಳ ಕೈಯಲ್ಲಿ!

ಶಾಲಾ - ಕಾಲೇಜ್​ ಓಪನ್​ ಮಾಡುವುದಕ್ಕೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಲು ಅವಕಾಶ ನೀಡಲಾಗಿದ್ದು, ಆನ್​ಲೈನ್​​ ತರಗತಿ ಮುಂದುವರಿಸಲು ಅವಕಾಶ ನೀಡಲಾಗಿದೆ. ಶಾಲೆಗಳಿಗೆ ಹೋಗಲು ಇಷ್ಟಪಡುವ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದು ಅತಿ ಅವಶ್ಯವಾಗಿದೆ. ಶಾಲೆ ಓಪನ್ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಪೋಷಕರೊಂದಿಗೆ ಚರ್ಚೆ ನಡೆಸುವಂತೆ ತಿಳಿಸಲಾಗಿದೆ.

ಕಾಲೇಜ್​- ವಿಶ್ವವಿದ್ಯಾಲಯ ಓಪನ್​ ಮಾಡುವುದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ ನಿರ್ಧಾರ ಕೈಗೊಳ್ಳಲಿದ್ದು, ಪಿ.ಹೆಚ್​ಡಿ ಹಾಗೂ ಪದವಿ ವಿದ್ಯಾರ್ಥಿಗಳು ಅಕ್ಟೋಬರ್​ 15ರ ಬಳಿಕ ತರಗತಿಗಳಿಗೆ ಹೋಗಬಹುದಾಗಿದೆ.

ಈಜು ಕೊಳಗಳಿಗೆ ಹೋಗುವ ಕ್ರೀಡಾಪಟುಗಳಿಗೆ ಅಕ್ಟೋಬರ್​ 15ರಿಂದ ಅವಕಾಶ ನೀಡಲಾಗಿದ್ದು, ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. ಚಿತ್ರಮಂದಿರ, ಥಿಯೇಟರ್​​, ಮಲ್ಟಿಪ್ಲೆಕ್ಸ್​​ ಅಕ್ಟೋಬರ್​​​ 15ರಿಂದ ರೀ ಓಪನ್​ ಆಗಲಿದ್ದು, ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಮನೋರಂಜನೆ ಪಾರ್ಕ್​​​ ಓಪನ್​ ಮಾಡಲು ಅವಕಾಶ ನೀಡಲಾಗಿದ್ದು, ಇವು ಕೂಡ ಅಕ್ಟೋಬರ್​ 15ರಿಂದ ಕಾರ್ಯಾರಂಭ ಮಾಡಲಿವೆ.

ಮಹಾರಾಷ್ಟ್ರದಲ್ಲಿ ಅಕ್ಟೋಬರ್​ 5ರಿಂದ ಹೋಟೆಲ್​, ಫುಡ್​ ಕೋರ್ಟ್ಸ್​​, ಬಾರ್​​ ಆ್ಯಂಡ್​ ರೆಸ್ಟೋರೆಂಟ್​ ಅಕ್ಟೋಬರ್​​​ 5ರಿಂದ ಓಪನ್​ ಆಗಲಿದ್ದು, ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ABOUT THE AUTHOR

...view details