ಕರ್ನಾಟಕ

karnataka

ETV Bharat / bharat

ಅನ್​ಲಾಕ್​ 4.0: ಇಂದಿನಿಂದ ದೇಶದ ಕೆಲ ರಾಜ್ಯಗಳಲ್ಲಿ ಶಾಲೆಗಳು ಪುನಾರಂಭ - ನವದೆಹಲಿ ಸುದ್ದಿ

ಅನ್​ಲಾಕ್​ 4.0 ಅಡಿಯಲ್ಲಿ ದೇಶಾದ್ಯಂತ ಶಾಲೆಗಳು ಇಂದಿನಿಂದ ಭಾಗಶಃ ಪುನಾರಂಭಗೊಂಡಿವೆ. ಇನ್ನು ಶಾಲೆ ಪುನಾರಂಭಗೊಳ್ಳುವುದರ ಜೊತೆಗೆ ಕೆಲ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಂದ್ರ ಸೂಚಿಸಿದೆ.

ದೇಶದ ಕೆಲ ಭಾಗದಲ್ಲಿ ಶಾಲೆಗಳು ರಿ-ಓಪನ್​
ದೇಶದ ಕೆಲ ಭಾಗದಲ್ಲಿ ಶಾಲೆಗಳು ರಿ-ಓಪನ್​

By

Published : Sep 21, 2020, 12:24 PM IST

ನವದೆಹಲಿ: ಅನ್​ಲಾಕ್​ 4.0ರ ಅಡಿಯಲ್ಲಿ ದೆಹಲಿ, ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ್ ಮತ್ತು ಕೇರಳವನ್ನು ಹೊರತುಪಡಿಸಿ ದೇಶಾದ್ಯಂತ ಶಾಲೆಗಳು ಇಂದಿನಿಂದ ಭಾಗಶಃ ಪುನಾರಂಭಗೊಂಡಿವೆ.

9-12ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರಿಂದ ಮಾರ್ಗದರ್ಶನ ಪಡೆದು ಸ್ವಯಂಪ್ರೇರಿತ ಆಧಾರದ ಮೇಲೆ ಶಾಲೆಗಳಿಗೆ ಬರಲು ಅವಕಾಶ ನೀಡಲಾಗಿದೆ. ಆದಾಗ್ಯೂ ಶಾಲೆಗೆ ಹಾಜರಾಗಲು ಪೋಷಕರ ಲಿಖಿತ ಅನುಮತಿ ಅಗತ್ಯ ಎಂದು ಸೂಚಿಸಲಾಗಿದೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ನೌಕರರು ಅನುಸರಿಸಬೇಕಾದ ಮಾರ್ಗಸೂಚಿಗಳು:

  • ಸಾಧ್ಯವಾದಷ್ಟು ಕನಿಷ್ಠ 6 ಅಡಿಗಳ ಭೌತಿಕ ಅಂತರ ಕಾಯ್ದುಕೊಳ್ಳುವುದು
  • ಮಾಸ್ಕ್​ಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು
  • ಆಗಾಗ ಕೈ ತೊಳೆಯುವುದು
  • ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್‌ಗಳ ಬಳಕೆ ಮಾಡುವುದು
  • ಕೆಮ್ಮುವಾಗ ಮತ್ತು ಸೀನುವಾಗ ಕೈಯಿಂದ ಅಥವಾ ಕರವಸ್ತ್ರದಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು
  • ಆರೋಗ್ಯದ ಸ್ವಯಂ ಮೇಲ್ವಿಚಾರಣೆ ಮತ್ತುಅನಾರೋಗ್ಯವನ್ನು ಶೀಘ್ರ ವರದಿ ಮಾಡುವುದು
  • ಅಲ್ಲಲ್ಲಿ ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ

ABOUT THE AUTHOR

...view details