ಅಯೋಧ್ಯೆ (ಉತ್ತರ ಪ್ರದೇಶ):ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಬಂದ್ ಆಗಿದ್ದ ದೇವಾಲಯಗಳನ್ನು ಭಕ್ತರ ಪ್ರವೇಶಕ್ಕೆ ಮತ್ತೆ ತೆರೆಯಲಾಗುತ್ತಿದೆ. ಇದರಂತೆ ಅಯೋಧ್ಯೆಯ ಪ್ರಸಿದ್ಧ ತಾತ್ಕಾಲಿಕ ರಾಮ ಮಂದಿರವನ್ನು ಇಂದು ಮತ್ತೆ ತೆರೆಯಲಾಯಿತು.
ರಾಮ ದೇವರ ಮೂರ್ತಿಯನ್ನು ಬುಲೆಟ್ ಪ್ರೂಫ್ ದೇವಾಲಯದಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಿದ್ದು ಭಕ್ತರಿಗೆ ವಿಭಿನ್ನ ಅನುಭವ ನೀಡಿದೆ. ಧಾರ್ಮಿಕ ಸ್ಥಳಗಳಿಗೆ ಅನುಗುಣವಾಗಿ ಗೃಹ ಸಚಿವಾಲಯ ಘೋಷಿಸಿದ ಹೊಸ ಮಾರ್ಗಸೂಚಿಗಳೊಂದಿಗೆ, ಕೇವಲ ಐದು ಭಕ್ತರಿಗೆ ಮಾತ್ರ ಒಂದೇ ಸಮಯದಲ್ಲಿ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.