ಕರ್ನಾಟಕ

karnataka

ETV Bharat / bharat

ಆಯುಧಗಳಿಂದ ದಾಳಿ ಮಾಡಿ ಒಂದೇ ಕುಟುಂಬದ ಮೂವರ ಬರ್ಬರ ಕೊಲೆ..! - ರಾಜಸ್ಥಾನ ಅಪರಾಧಸುದ್ದಿ

ಒಂದೇ ಕುಟುಂಬದ ಮೂವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ರಾಜಸ್ಥಾನದ ಬಿಲಾಢ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

murder
ಮೂವರ ಕೊಲೆ

By

Published : Jun 30, 2020, 7:10 PM IST

ಜೋಧಪುರ (ರಾಜಸ್ಥಾನ):ತೋಟದ ಮನೆಯಲ್ಲಿ ವಾಸವಿದ್ದ ಒಂದೇ ಕುಟುಂಬದ ಮೂವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಬಿಲಾಢ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿನ ಜೆಂತಿವಾಸ್ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಪತಿ, ಪತ್ನಿ ಹಾಗೂ ಮಗುವೊಂದನ್ನು ದುಷ್ಕರ್ಮಿಗಳು ಭೀಕರವಾಗಿ ಕೊಂದಿದ್ದಾರೆ. ಈ ವೇಳೆ ಮತ್ತಿಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದೇ ಕುಟುಂಬದ ಮೂವರ ಬರ್ಬರ ಕೊಲೆ

ಗ್ರಾಮಸ್ಥರಿಂದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಮಕ್ಕಳನ್ನು ವಿಚಾರಿಸಿದಾಗ ಅಪರಿಚಿತರು ಕೊಲೆ ಮಾಡಿ ಪರಾರಿಯಾಗಿರುವುದು ಗೊತ್ತಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್​ಪಿ ರಾಹುಲ್​ ಭರತ್​ ತನಿಖೆ ಆರಂಭಿಸಿದ್ದಾರೆ. ಪೊಲೀಸ್​ ಶ್ವಾನಗಳು ಕೂಡಾ ಬಂದಿವೆ. ಕೆಲವೊಂದು ಸಾಮಗ್ರಿಗಳನ್ನು ಎಫ್​​​ಎಸ್​ಎಲ್​ಗೆ ಕಳುಹಿಸಲಾಗಿದೆ. ಪ್ರಥಮ ಮಾಹಿತಿ ವರದಿಯಂತೆ ಚೂಪಾದ ಆಯುಧಗಳಿಂದ ದುಷ್ಕರ್ಮಿಗಳು ದಾಳಿ ಮಾಡಿರುವುದು ತಿಳಿದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ABOUT THE AUTHOR

...view details