ಉತ್ತರಾಖಂಡ್:ದೇಶದೆಲ್ಲಡೆ ಕೊರೊನಾ ಭೀತಿ ಹೆಚ್ಚಾಗಿದ್ದು, ಲಾಕ್ಡೌನ್ ಜಾರಿಯಲ್ಲಿದೆ. ಈ ನಡುವೆ ಉತ್ತರಾಖಂಡ್ ಮತ್ತು ಉತ್ತರಪ್ರದೇಶದ ಗಡಿ ಭಾಗದಲ್ಲಿ ಜೋಡಿಯೊಂದು ಮಾವು, ಅರಳಿ ಎಲೆಯನ್ನೇ ಅಗ್ನಿಕುಂಡ ಮಾಡಿಕೊಂಡು ವಿನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾವು, ಅರಳಿ ಎಲೆಯನ್ನೇ ಅಗ್ನಿಕುಂಡ ಮಾಡಿಕೊಂಡು ಸಪ್ತಪದಿ ತುಳಿದ ನವ ಜೋಡಿ - ಉತ್ತರಾಖಂಡ ಲೇಟೆಸ್ಟ್ ನ್ಯೂಸ್
ಉತ್ತರಾಖಂಡ್ ವಿನೂತನ ಮದುವೆಗೆ ಸಾಕ್ಷಿಯಾಗಿದ್ದು, ಉಧಮ್ ಸಿಂಗ್ ಜಿಲ್ಲೆಯ ರಾಂಪುರ ಗಡಿಯಲ್ಲಿ ಜೋಡಿಯೊಂದು ಮಾವು, ಅರಳಿ ಎಲೆಯನ್ನ ಅಗ್ನಿಕುಂಡ ಮಾಡಿಕೊಂಡು ವಿನೂತನವಾಗಿ ಮದುವೆಯಾಗಿದ್ದಾರೆ.
ರಾಂಪುರ ಜಿಲ್ಲೆಯ ಮಿಲಾಕ್ ನಿವಾಸಿ ಖೇಮ್ ಕರಣ್ ಮತ್ತು ರುದ್ರಪುರದ ನಿವಾಸಿ ಪೂಜಾ ಎಂಬುವವರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಮದುವೆಗೆ ಬೇಕಾದ ಪೂಜಾ ಸಾಮಾಗ್ರಿಗಳು ಸಿಗದ ಹಿನ್ನೆಲೆಯಲ್ಲಿ ಉಧಮ್ ಸಿಂಗ್ನಗರ ಜಿಲ್ಲೆಯ ರಾಂಪುರ್ ಗಡಿಯಲ್ಲಿರುವ ಶಿವನ ದೇವಾಲಯದಲ್ಲಿ ಮಾವಿನ ಎಲೆ ಮತ್ತು ಅರಳಿ ಮರದ ಎಲೆಗಳ ಅಗ್ನಿಕುಂಡ ಮಾಡಿಕೊಂಡು ವಿವಾಹ ಮಾಡಿಕೊಂಡಿದ್ದಾರೆ.
ಮದುವೆಗೆ ಇಬ್ಬರ ಮನೆಯವರಿಂದಲೂ ಒಪ್ಪಿಗೆ ಇರಲ್ಲಿಲ್ಲ. ಜಿಲ್ಲಾಡಳಿತದಿಂದ ಅನುಮತಿ ಪಡೆದು ಮದುವೆ ಮಾಡಿಕೊಳ್ಳಲು ವರ ಮುಂದಾಗಿದ್ದನು. ಈ ವೇಳೆ ಉಧಮ್ ಸಿಂಗ್ನಗರ ಜಿಲ್ಲೆಯ ರಾಂಪುರ್ ಗಡಿಯಲ್ಲಿ ಸಂಚರಿಸುವಾಗ ಪೊಲೀಸರು ತಡೆದಿದ್ದಾರೆ. ಬಳಿಕ ಅಲ್ಲಿನ ಜಿಲ್ಲಾಡಳಿತದ ಅನುಮತಿ ನೀಡಿದೆ. ನವ ಜೋಡಿಗೆ ಪೊಲೀಸರು ಶುಭ ಕೋರಿದರು.