ನವದೆಹಲಿ: ಅಕ್ರಮ ವಲಸಿಗ ವ್ಯಕ್ತಿಯೊಬ್ಬರು ಆಧಾರ್ ಕಾರ್ಡ್ ಅನ್ನು ನಕಲಿ ದಾಖಲೆಗಳ ಆಧಾರದಲ್ಲಿ ಪಡೆದುಕೊಂಡಿದ್ದಾರೆ ಎಂಬ ಆರೋಪದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸ್ಪಷ್ಟನೆ ನೀಡಿದೆ.
ಅಕ್ರಮ ವಲಸಿಗರು ಎಂದು ಶಂಕಿಸಿದ ರಾಜ್ಯ ಪೊಲೀಸರ ದೂರುಗಳ ಮೇಲೆ ಸುಳ್ಳು ನೆಪದಲ್ಲಿ ಆಧಾರ್ ಪಡೆಯಲು ಯುಐಡಿಎಐ ಕೆಲವು ನಿವಾಸಿಗಳಿಗೆ ವಿಚಾರಣೆಯ ನೋಟಿಸ್ ನೀಡಿದೆ ಎಂಬುದರ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಈ ವರದಿಗಳು ಸರಿಯಾದ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸಿಲ್ಲ ಎಂದು ಈ ಮೂಲಕ ಯುಐಡಿಎಐ ತಿಳಿಸುತ್ತದೆ. ಆಧಾರ್‌ಗೆ ನಾಗರಿಕ ಪೌರತ್ವಕ್ಕೂ ಯಾವುದೇ ಸಂಬಂಧವಿಲ್ಲ. ಆಧಾರ್ ಪೌರತ್ವದ ದಾಖಲೆಯಲ್ಲ ಎಂದಿದೆ.
ಅಧಿಕೃತ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಯಾವುದೇ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಅವರು ಭಾರತಕ್ಕೆ ಆಗಮಿಸಿದ 182 ದಿನ ಕಾದು ಆಧಾರ್‌ಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಸುಪ್ರೀಂಕೋರ್ಟ್ (ಎಸ್‌ಸಿ) ತನ್ನ ಅಕ್ರಮ ವಲಸಿಗರಿಗೆ ಆಧಾರ್ ನೀಡದಂತೆ ಯುಐಡಿಎಐಗೆ ನಿರ್ದೇಶನ ನೀಡಿದೆ ಎಂದು ಸ್ಪಷ್ಟನೆ ನೀಡಿದೆ.