ಕರ್ನಾಟಕ

karnataka

ETV Bharat / bharat

ಆಯುಷ್​ ಸಚಿವ ಶ್ರೀಪಾದ್ ನಾಯಕ್ ಆರೋಗ್ಯದಲ್ಲಿ ಏರುಪೇರು: ಗೋವಾ ಸಿಎಂ ಹೇಳಿಕೆ - ಆಯುಷ್ ಸಚಿವ

ಕೊರೊನಾ ಸೋಂಕಿನಿಂದ ಬಳಲುತ್ತಿರುವ ಕೇಂದ್ರದ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ದೆಹಲಿಯಿಂದ ಏಮ್ಸ್​ ವೈದ್ಯರ ತಂಡ ಆಗಮಿಸಲಿದೆ.

ಆಯುಷ್​ ಸಚಿವ ಶ್ರೀಪಾದ್ ನಾಯಕ್
ಆಯುಷ್​ ಸಚಿವ ಶ್ರೀಪಾದ್ ನಾಯಕ್

By

Published : Aug 25, 2020, 9:46 AM IST

ಪಣಜಿ (ಗೋವಾ):ಕೋವಿಡ್ -19ಗೆ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಏಮ್ಸ್​ನ ವೈದ್ಯರ ತಂಡ ಹೆಚ್ಚಿನ ಚಿಕಿತ್ಸೆ ನೀಡಲು ಗೋವಾಗೆ ಆಗಮಿಸಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ನಾಯಕ್​ರ ವೈದ್ಯಕೀಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ನವದೆಹಲಿಯ ಕಮಾಂಡ್ ಆಸ್ಪತ್ರೆ ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ವೈದ್ಯರ ಜಂಟಿ ತಂಡ ಇಂದು ರಾತ್ರಿ ಗೋವಾಕ್ಕೆ ಆಗಮಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ನಾಯಕ್ ಅವರನ್ನು ದೆಹಲಿಗೆ ಸ್ಥಳಾಂತರಿಸಬೇಕೇ ಎಂಬುದರ ಕುರಿತು ವೈದ್ಯರ ತಂಡ ಇಂದು ನಿರ್ಧರಿಸಲಿದೆ.

"ನಾಯಕ್ ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ. ಆದರೆ ಸೋಮವಾರ ಅವರ ಆಮ್ಲಜನಕದ ಮಟ್ಟ ಕುಸಿದಿತ್ತು. ನಂತರ ವೈದ್ಯಕೀಯ ಪರಿಶೀಲನೆ ನಡೆಸಲಾಯಿತು" ಎಂದು ಸಾವಂತ್ ಹೇಳಿದರು.

ಕೊರೊನಾ ವೈರಸ್‌ಗೆ ಪಾಸಿಟಿವ್​ ಹಿನ್ನೆಲೆಯಲ್ಲಿ ಆಗಸ್ಟ್ 12ರಂದು ಶ್ರೀಪಾದ್ ನಾಯಕ್ ಆಸ್ಪತ್ರೆಗೆ ದಾಖಲಾಗಿದ್ದರು.

ABOUT THE AUTHOR

...view details