ಕರ್ನಾಟಕ

karnataka

ETV Bharat / bharat

ಕೊರೊನಾ ಬಗ್ಗೆ ಆತಂಕ ಬೇಡ, ನಮ್ಮಲ್ಲಿ ಸಾಕಷ್ಟು ಔಷಧ ಸಂಗ್ರಹವಿದೆ: ಡಿವಿಎಸ್ - ಕೊರೊನಾ ಬಗ್ಗೆ ಆತಂಕ ಬೇಡ

ಕೊರೊನಾ ಸೋಂಕಿನ ಚಿಕಿತ್ಸೆ ಬಗ್ಗೆ ಜನರು ಚಿಂತಿಸಬೇಕಾಗಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

people need not to be panic on coronovirus,ಕೊರೊನಾ ಬಗ್ಗೆ ಆತಂಕ ಬೇಡ
ಡಿ.ವಿ.ಸದಾನಂದ ಗೌಡ

By

Published : Mar 6, 2020, 8:31 PM IST

ನವದೆಹಲಿ: ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಯಾವುದೇ ಆತಂಕ ಬೇಡ, ಭಾರತ ಸರ್ಕಾರವು ಸಾಕಷ್ಟು ಸಕ್ರಿಯ ಔಷಧ ಪದಾರ್ಥಗಳನ್ನು ಹೊಂದಿದೆ. ಜನರು ಚಿಕಿತ್ಸೆ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿರುವ ಅವರು, ಸಕ್ರಿಯ ಔಷಧೀಯ ಪದಾರ್ಥಗಳನ್ನು ರಫ್ತು ಮಾಡುವಲ್ಲಿ ಚೀನಾ ಪ್ರಮುಖ ದೇಶವಾಗಿದೆ. ಆದರೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೀನಾ, ಔಷಧಿ ಪದಾರ್ಥಗಳ ರಫ್ತು ನಿಲ್ಲಿಸಿದೆ. ಆದಾಗ್ಯೂ, ಭಾರತದಲ್ಲಿ ಸಾಕಷ್ಟು ಔಷಧಿ ಸಂಗ್ರಹವಿದೆ. ಅದನ್ನು ಮುಂದಿನ ಮೂರು ತಿಂಗಳು ನಿರ್ವಹಿಸಬಹುದಾಗಿದೆ. ಆದ್ದರಿಂದ, ಚಿಕಿತ್ಸೆ ಮತ್ತು ಔಷಧಿಗಳ ಬಗ್ಗೆ ಜನರು ಚಿಂತಿಸಬೇಡಿ ಎಂದು ಸದಾನಂದ ಗೌಡ ಮನವಿ ಮಾಡಿದ್ದಾರೆ.

ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

'ಕೊರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಯಲು ಪ್ರಧಾನಿ ಮೋದಿ, ಅಧಿಕಾರಿಗಳೊಂದಿಗೆ ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದಾರೆ. ಯಾರಾದರೂ ಹೆಚ್ಚಿನ ಬೆಲೆಗೆ ಮಾಸ್ಕ್​ಗಳನ್ನು ಮಾರಾಟ ಮಾಡುತ್ತಿದ್ದರೆ ಜನರು ದೂರು ನೀಡಬಹುದು' ಎಂದು ಹೇಳಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಮತ್ತು ಪುಲ್ವಾಮಾ ಸೇರಿದಂತೆ 7 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಕೇಂದ್ರಗಳೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸಲಿದ್ದಾರೆ.

ಕಡಿಮೆ ದರದಲ್ಲಿ ಜೀವನಾವಶ್ಯಕ ಔಷಧಿಗಳು ರಿಯಾಯಿತಿ ದರದಲ್ಲಿ ಜನರಿಗೆ ದೊರಕುವಂತಾಗಲಿ ಎಂದು ಈ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕರ್ನಾಟಕದಲ್ಲಿ 622 ಕೇಂದ್ರಗಳಿವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಒಂದೊಂದು ಗೋದಾಮುಗಳಿದ್ದು, ಚೆನ್ನೈನ ತಿರುವಲ್ಲೂರಿನಲ್ಲಿ ಒಂದು ಗೋದಾಮು ಕರ್ಯನಿರ್ವಹಿಸುತ್ತಿದೆ ಎಂದು ಸದಾನಂದ ಗೌಡ ತಿಳಿಸಿದ್ದಾರೆ.

ABOUT THE AUTHOR

...view details