ಕರ್ನಾಟಕ

karnataka

ರಾಮ್​ ವಿಲಾಸ್​ ಪಾಸ್ವಾನ್​ ನಿಧನ: ಪ್ರಧಾನಿ ಮೋದಿ ಸೇರಿ ಅನೇಕರಿಂದ ಸಂತಾಪ

By

Published : Oct 8, 2020, 9:51 PM IST

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯ ರಾಜಕೀಯದಲ್ಲಿದ್ದ ಕೇಂದ್ರ ಸಚಿವ ರಾಮ್​ ವಿಲಾಸ್​ ಪಾಸ್ವಾನ್​ ಏಮ್ಸ್​​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

PM Modi condoles demise
PM Modi condoles demise

ನವದೆಹಲಿ:ಕೇಂದ್ರ ಸಚಿವ ರಾಮ್​ ವಿಲಾಸ್​ ಪಾಸ್ವಾನ್(74)​ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ.

ರಾಮ್​ ವಿಲಾಸ್​ ಪಾಸ್ವಾನ್ ಇನ್ನಿಲ್ಲ

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಖಾತೆ ಪೂರೈಕೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಪಾಸ್ವಾನ್ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಪ್ರಧಾನಿ ಮೋದಿ ಸಂತಾಪ

ನಾನು ಪದಗಳನ್ನು ಮೀರಿ ದುಃಖಿತನಾಗಿದ್ದೇನೆ. ಶ್ರೀ ರಾಮ್​ ವಿಲಾಸ್​ ಪಾಸ್ವಾನ್ ಜೀ ಅವರ ನಿಧನದಿಂದ ನನಗೆ ವೈಯಕ್ತಿಕ ನಷ್ಟವಾಗಿದೆ. ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಮೌಲ್ಯಯುತ ಸಹೋದ್ಯೋಗಿ ಮತ್ತು ಪ್ರತಿಯೊಬ್ಬ ಬಡ ವ್ಯಕ್ತಿ ಘನತೆಯಿಂದ ಜೀವನ ನಡೆಸುತ್ತಿದ್ದಾರೆ ಎಂಬುದನ್ನ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದರು ಎಂದಿದ್ದಾರೆ.

ರಾಷ್ಟ್ರಪತಿ ರಾಮನಾಥ್​ ಕೋವಿಂದ್​

ಕೇಂದ್ರ ಸಚಿವ ರಾಮ್​ ವಿಲಾಸ್​ ಪಾಸ್ವಾನ್​ ನಿಧನದಿಂದ ದೇಶ ಓರ್ವ ದೂರದೃಷ್ಠಿ ನಾಯಕನನ್ನು ಕಳೆದುಕೊಂಡಿದೆ. ಸಂಸತ್ತಿನಲ್ಲಿ ಅತ್ಯಂತ ಸಕ್ರಿಯ ಮತ್ತು ದೀರ್ಘಕಾಲ ಸೇವೆ ಸಲ್ಲಿಸಿರುವ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರು ತುಳಿತಕ್ಕೊಳಗಾದವರ ಧ್ವನಿಯಾಗಿದ್ದರು ಎಂದು ಟ್ವೀಟ್​ ಮಾಡಿದ್ದಾರೆ.

ಬಿಹಾರ ಸಿಎಂ ನಿತೀಶ್​ ಕುಮಾರ್​

ಕೇಂದ್ರ ಸಚಿವ ರಾಮ್​ವಿಲಾಸ್​ ಪಾಸ್ವಾನ್ ನಿಧನಕ್ಕೆ ಬಿಹಾರ ಸಿಎಂ ಸಂತಾಪ ಸೂಚಿಸಿದ್ದಾರೆ. ಭಾರತೀಯ ರಾಜಕಾರಣದ ಎತ್ತರದ ವ್ಯಕ್ತಿತ್ವ - ತೀಕ್ಷ್ಣವಾದ ವಾಗ್ಮಿ, ಜನಪ್ರಿಯ ನಾಯಕ, ಸಮರ್ಥ ಆಡಳಿತಗಾರ, ಸೌಹಾರ್ದಯುತ ವ್ಯಕ್ತಿತ್ವ ಹೊಂದಿರುವ ಪ್ರಬಲ ಸಂಘಟಕರು ಎಂದು ಹೇಳಿದ್ದು, ಅವರ ನಿಧನದಿಂದ ತಮಗೆ ವೈಯಕ್ತಿಕ ನಷ್ಟವಾಗಿದೆ ಎಂದಿದ್ದಾರೆ.

ರಾಹುಲ್​ ಗಾಂಧಿ

ರಾಮ್​ ವಿಲಾಸ್​ ಪಾಸ್ವಾನ್​ ಜೀ ಅವರ ಅಕಾಲಿನ ನಿಧನದ ಸುದ್ದಿ ದುಃಖಕರವಾಗಿದೆ. ಬಡ - ದೀನ ದಲಿತರು ಇಂದು ಬಲವಾದ ರಾಜಕೀಯ ಧ್ವನಿ ಕಳೆದುಕೊಂಡಿದ್ದಾರೆ.

ಇದರ ಜತೆಗೆ ಜತೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ರವಿಶಂಕರ್​ ಪ್ರಸಾದ್​, ಅಮಿತ್​ ಶಾ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.

ABOUT THE AUTHOR

...view details