ನವದೆಹಲಿ:ಮುಂಜಾನೆಯೇ ಮತಗಟ್ಟೆಗೆ ಆಗಮಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಉತ್ತರಪ್ರದೇಶದ ಲಖನೌ ಕ್ಷೇತ್ರದಿಂದ ರಾಜನಾಥ್ ಸಿಂಗ್ ಕಣಕ್ಕಿಳಿದಿದ್ದು, ಮತಗಟ್ಟೆ ಸಂಖ್ಯೆ 333ರಲ್ಲಿ ಮತದಾನ ಮಾಡಿದ್ದಾರೆ.
ಗೃಹ ಸಚಿವ ರಾಜನಾಥ್ ಸಿಂಗ್, ರಾಜ್ಯವರ್ಧನ್ ರಾಥೋರ್ ಸೇರಿ ಗಣ್ಯರಿಂದ ಹಕ್ಕು ಚಲಾವಣೆ - undefined
2019 ನೇ ಲೊಕಸಭಾ ಚುನಾವಣೆಯ 5ನೇ ಹಂತದ ಚುನಾವನೆ ಪ್ರಕ್ರಿಯೆ ಆರಂಭವಾಗಿದ್ದು, 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಗಣ್ಯಾತಿಗಣ್ಯರು ಬೆಳಗ್ಗೆಯೇ ಮತದಾನ ಮಾಡಿದ್ದಾರೆ
ಮಾಜಿ- ಹಾಲಿ ಕೇಂದ್ರ ಸಚಿವರಿಂದ ಮತದಾನ
ಇತ್ತ ರಾಜಸ್ಥಾನದ ಜೈಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಹಾಗೇ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರ ತಂದೆ ಕೇಂದ್ರದಮಾಜಿ ಸಚಿವ ಯಶವಂತ್ ಸಿನ್ಹಾ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಾರ್ಖಂಡ್ನ ಹಜಾರಿಬಾಗ್ ಕ್ಷೇತ್ರದ ಮತಗಟ್ಟೆಗೆ ಆಗಮಿಸಿದ ಯಶವಂತ್ ಸಿನ್ಹಾ ಜನರೊಂದಿಗೆ ಸರತಿಯಲ್ಲೇ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.