ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಭವಿ ರಾಜಕಾರಣಿ. ಆದ್ರೆ ಜನರು ಜೈ ಶ್ರೀ ರಾಮ ಎಂದು ಘೋಷಣೆ ಕೂಗುವುದನ್ನ ತಡೆಯುವ ಅವರ ವರ್ತನೆ ಮಾತ್ರ ಅಸಹಜ ಮತ್ತು ವಿಲಕ್ಷಣ ಎನಿಸುತ್ತದೆ ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಇದು ಯಾರಿಗೂ ಒಳ್ಳೆಯದಲ್ಲ. ಅವರು ತಮ್ಮ ಸ್ಥಾನದ ಘನತೆಯನ್ನ ತಿಳಿದುಕೊಂಡು ನಡೆಯಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೆಳೆಯುತ್ತಿರೋದು ದೀದಿಯ ನಿದ್ದೆಗೆಡಿಸಿದೆ. ಬೇಕಾದರೆ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ವಾಪಾಸ್ ಬರಲಿ ಎಂದಿದ್ದಾರೆ.