ಕರ್ನಾಟಕ

karnataka

ETV Bharat / bharat

2021ರ ಜನಗಣತಿ ಜಾತಿ ಆಧಾರದ ಮೇಲೆ ನಡೆಯಬೇಕು: ಕೇಂದ್ರ ಸಚಿವ ರಾಮದಾಸ್​ ಅಠಾವಳೆ - ಜಾತಿ ಆಧಾರದ ಮೇಲೆ ಜನಗಣತಿ ನಡೆಸುವಂತೆ ಕೇಂದ್ರ ಸಚಿವ ರಾಮದಾಸ್​ ಅಠಾವಳೆ ಆಗ್ರಹ

2021ರ ಜನಗಣತಿಯು ಜಾತಿ ಆಧಾರದ ಮೇಲೆ ನಡೆಯಬೇಕು ಎಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಮುಖ್ಯಸ್ಥ ರಾಮದಾಸ್ ಅಠಾವಳೆ ಒತ್ತಾಯಿಸಿದ್ದಾರೆ.

Republican Party of India
ಕೇಂದ್ರ ಸಚಿವ ರಾಮದಾಸ್​ ಅಠಾವಳೆ

By

Published : Jan 12, 2021, 7:17 AM IST

ಅಗರ್ತಲಾ:2021ರ ಜನಗಣತಿಯನ್ನು ಜಾತಿ ಆಧಾರದ ಮೇಲೆ ಮಾಡಬೇಕು ಎಂದು ಕೇಂದ್ರ ಸಚಿವ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಅಧ್ಯಕ್ಷ ರಾಮದಾಸ್ ಅಠಾವಳೆ ಒತ್ತಾಯಿಸಿದ್ದಾರೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಸೇರಿದ ಒಟ್ಟು ಜನಸಂಖ್ಯೆಯನ್ನು ಈಗಾಗಲೇ ಲೆಕ್ಕಾಚಾರ ಹಾಕಲಾಗ್ತಿದ್ದು, ಪ್ರತಿ ಜನಗಣತಿಯಲ್ಲಿಯೂ ಈ ಜಾತಿವಾರು ಕೌಂಟಿಂಗ್​ ಮುಂದುವರಿಯಲಿದೆ ಎಂದು ತಿಳಿಸಿದರು.

ಜಾತಿ ಆಧಾರಿತ ಜನಗಣತಿಗೆ ಒತ್ತಾಯ

"ತ್ರಿಪುರ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 24 ರಷ್ಟು ಜನ ಒಬಿಸಿ ಹಿನ್ನೆಲೆಯುಳ್ಳವರಾಗಿದ್ದಾರೆ. ಮತ್ತು ಈ ವರ್ಗಕ್ಕೆ ಸೇರುವ ಜನರು ಈಗಾಗಲೇ ತಮಗೆ ಮೀಸಲಿರಿಸುವ ಶೇ. 27 ರಷ್ಟು ಮೀಸಲಾತಿ ಲಾಭವನ್ನು ಅವರು ಪಡೆಯುತ್ತಿದ್ದಾರೆ. ಆದರೆ, ಮೀಸಲಾತಿಗಾಗಿ ಒತ್ತಾಯಿಸುತ್ತಿರುವ ಇತರ ಕೆಲವು ಸಮುದಾಯಗಳಿವೆ. ಹೀಗಾಗಿ ನನ್ನ ಬೇಡಿಕೆಯೆಂದರೆ 2021 ರ ಜನಗಣತಿ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳನ್ನು ಹೊರತುಪಡಿಸಿ, ಉಳಿದ ಇತರ ವರ್ಗಗಳ ಜನಸಂಖ್ಯೆ ಅಧಿಕೃತವಾಗಿ ದಾಖಲಿಸಲು ಜಾತಿ ಆಧಾರಿತವಾಗಿ ನಡೆಯಬೇಕು ಎಂದು ಅಠಾವಳೆ ಹೇಳಿದ್ರು.

ಇನ್ನು ಪಶ್ಚಿಮ ಬಂಗಾಳ ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಈ ಚುನಾವಣೆಗಳು ಬಿಜೆಪಿ ಪರವಾಗಿರುತ್ತವೆ. ಮಮತಾ ಬ್ಯಾನರ್ಜಿ ಕೂಡ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಸಾಡುತ್ತಾರೆ. ಆದರೆ, ಫಲಿತಾಂಶಗಳು ಬಿಜೆಪಿಗೆ ಅನುಕೂಲಕರವಾಗುತ್ತವೆ. ದಿಲೀಪ್ ಘೋಷ್ ನೇತೃತ್ವದ ಪಶ್ಚಿಮ ಬಂಗಾಳದ ಬಿಜೆಪಿ, ಸರ್ಕಾರ ರಚಿಸಲಿದೆ ಎಂದರು. ಪಶ್ಚಿಮ ಬಂಗಾಳದ ಜನರು ಮಮತಾ ಬ್ಯಾನರ್ಜಿಗೆ ಸಾಕಷ್ಟು ಸಮಯ ನೀಡಿದ್ದಾರೆ ಮತ್ತು ಈಗ ಪಿಎಂ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಅವಕಾಶ ನೀಡುವ ಇಚ್ಛೆ ಹೊಂದಿದ್ದಾರೆ ಎಂದ್ರು.

ಎಸ್‌ಸಿ, ಎಸ್‌ಟಿ ಸಮುದಾಯದ ಜನರ ಮೇಲಿನ ದೌರ್ಜನ್ಯದ ಪ್ರಮಾಣ ಕಡಿಮೆಯಾಗಿರುವುದಕ್ಕೆ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಕಾನೂನು ಸುವ್ಯವಸ್ಥೆಯನ್ನು ಕೇಂದ್ರ ಸಚಿವರು ಶ್ಲಾಘಿಸಿದರು. ಮಾಹಿತಿಗಳ ಪ್ರಕಾರ, 2014 ರಿಂದ 2020 ರವರೆಗೆ ತ್ರಿಪುರ ರಾಜ್ಯದಲ್ಲಿ ಕೇವಲ 6 ದೌರ್ಜನ್ಯದ ವರದಿಗಳು ವರದಿಯಾಗಿವೆ, ಅದು ಸಾಮಾಜಿಕ ಸಾಮರಸ್ಯದ ಸಂಕೇತವೆಂದು ಸಚಿವರು ಹೇಳಿದ್ರು.

ಇನ್ನು ತ್ರಿಪುರಕ್ಕೆ ತಮ್ಮ ಸಚಿವಾಲಯದಿಂದ ನಿಗದಿಪಡಿಸಿದ ಮೊತ್ತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರು ನಿಖರ ಅಂಕಿ ಅಂಶ ಹೇಳಲು ಬರುವುದಿಲ್ಲ ಆದರೆ, ಎಲ್ಲ ಸಚಿವಾಲಯಗಳು ಹಣವನ್ನು ಈಶಾನ್ಯ ರಾಜ್ಯಗಳಿಗೆ ಸಮಯಕ್ಕೆ ಬಿಡುಗಡೆ ಮಾಡುತ್ತವೆ. ಆದರೆ, ಈ ವರ್ಷ ಕೊರೊನಾದಿಂದಾಗಿ ಅನುದಾನ ಕಡಿಮೆಯಾಗಿರಬಹುದು ಎಂದು ಹೇಳಿದ್ರು.

ಇದೇ ವೇಳೆ, ಉತ್ತಮ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದಕ್ಕಾಗಿ ಸಿಎಂ ಬಿಪ್ಲಬ್​ ಕುಮಾರ್​ ದೇಬ್​ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ರಾಮದಾಸ್​, ತೀರಾ ಹಿಂದುಳಿದಿರುವ ಎಸ್‌ಸಿಗಳು, ಒಬಿಸಿಗಳು, ದಿವಾಂಗ್ಯರು, ಅನಾಥರು ಮತ್ತು ಇತರ ವರ್ಗಗಳ ಜೀವನ ಮಟ್ಟವನ್ನು ಅಭಿವೃದ್ಧಿಪಡಿಸಲು ಈ ಸರ್ಕಾರ ಉತ್ಸುಕವಾಗಿದೆ ಎಂದು ಅವರು ಸಮರ್ಥಿಸಿಕೊಂಡರು. ವಿದ್ಯಾರ್ಥಿವೇತನದ ಹೊಸ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಯೋಜನೆ 59,000 ಕೋಟಿ ರೂ. ವೆಚ್ಚದಾಗಿದ್ದು, ಪೂರ್ವ ಮೆಟ್ರಿಕ್ ಮತ್ತು ನಂತರದ ಮೆಟ್ರಿಕ್ ವಿದ್ಯಾರ್ಥಿವೇತನಕ್ಕಾಗಿ ಎಲ್ಲ ರಾಜ್ಯಗಳಿಗೆ 35,500 ಕೋಟಿ ರೂ. ನೀಡಲಾಗುವುದು ಮತ್ತು ಉಳಿದ 24,000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದ ಭಾಗದಿಂದ ನೀಡಬೇಕಾಗಿದೆ ಎಂದು ತಿಳಿಸಿದ್ರು.

ಇದನ್ನೂ ಓದಿ:ವಿಷಕಾರಿ ಮದ್ಯ ಸೇವಿಸಿ ಮಧ್ಯಪ್ರದೇಶದಲ್ಲಿ 8 ಮಂದಿ ಬಲಿ

ABOUT THE AUTHOR

...view details