ಬಕ್ಸರ್(ಬಿಹಾರ):ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಅಧಿಕ ಬೆಂಗಾವಲು ವಾಹನಗಳನ್ನು ತಡೆದಅಧಿಕಾರಿಗಳ ವಿರುದ್ಧವೇಕೇಂದ್ರ ಸಚಿವರೊಬ್ಬರು ಅನುಚಿತವಾಗಿ ವರ್ತಿಸಿರುವ ಘಟನೆ ಬಿಹಾರದ ಬಕ್ಸರ್ನಲ್ಲಿ ನಡೆದಿದೆ.
ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೆ ನಿನ್ನೆ ಅತೀಹೆಚ್ಚು ಬೆಂಗಾವಲು ವಾಹನಗಳೊಂದಿಗೆ ಸಾಗುತ್ತಿದ್ದಾಗ ಅಧಿಕಾರಿಗಳು ಅದಕ್ಕೆ ತಡೆಯೊಡ್ಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ತಿಳಿಸಿದರೂ, ಕೇಳದೆ ಅಧಿಕಾರಿಗಳಿಗೆ ಬೈದಿರುವ ವಿಡಿಯೋ ಈಗ ವೈರಲ್ ಆಗಿದೆ.
ನೀತಿ ಸಂಹಿತೆ ಉಲ್ಲಂಘಿಸಿದ ಕೇಂದ್ರ ಸಚಿವ ಚೌಬೆ, ಅಧಿಕಾರಿಗಳಿಗೇ ಆವಾಜ್ ಬೆಂಗಾವಲು ವಾಹನಗಳನ್ನು ತಡೆದ ವಿಭಾಗೀಯ ಅಧಿಕಾರಿ ಕೆಕೆ ಉಪಾಧ್ಯಾಯ ಎಂಬುವರಿಗೆ ಚೌಬೆ, ನನ್ನ ಬಳಿ ತಮಾಷೆ ಮಾಡಬೇಡಿ ಎಂದಿದ್ದಾರೆ. ತಾನು ಚುನಾವನಾ ಆಯೋಗದ ಆದೇಶವನ್ನು ಪಾಲಿಸುತ್ತಿರುವೆ ಎಂದು ಅಧಿಕಾರಿ ಹೇಳಿದರೂ, ಹಾಗಾದರೆ ನನ್ನನ್ನು ಜೈಲಿಗೆ ಹಾಕಿ ಎಂದು ಗರಂ ಆಗಿದ್ದಾರೆ. ಆಯೋಗದ ಆದೇಶದಂತೆ ನಾವು ಕಾರ್ಗಳನ್ನು ಸೀಜ್ ಮಾಡಬೇಕು ಎಂದಾಗ, ಕಾರಿನಲ್ಲಿ ನಾನಿದ್ದೇನೆ, ನೀವು ಸೀಜ್ ಮಾಡಲು ಬಿಡಲ್ಲ ಎಂದು ಆವಾಜ್ ಹಾಕಿದ್ದಾರೆ.
ವಾಗ್ವಾದದ ನಂತರ, ಅಧಿಕಾರಿಗಳು ಇಷ್ಟು ಎಚ್ಚರಿಕೆ ನೀಡಿದರೂ ಬೆಂಗಾವಲು ವಾಹನಗಳು ಮಂದೆ ಸಾಗಿದವು ಎನ್ನಲಾಗಿದೆ.ಆನಂತರ ಅಧಿಕಾರಿ ಉಪಾಧ್ಯಾಯ ಮಾಧ್ಯಮಗಳೊಂದಿಗೆ ಮಾತನಾಡಿ, ವಾಹನಗಳಿಗೆ ಅವಕಾಶವಿಲ್ಲದಿದ್ದರೂ ಝಿಲಾ ಮೈದಾನದಲ್ಲಿ ಅತೀಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿತ್ತು. 30-40 ಬೆಂಗಾವಲು ವಾಹನಗಳ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.