ಪಾಟ್ನಾ:ಲಾಕ್ಡೌನ್ ನಂತರ ಸಚಿವ ರವಿಶಂಕರ್ ಪ್ರಸಾದ್ ಮೊದಲ ಬಾರಿಗೆ ಎರಡು ದಿನಗಳ ಭೇಟಿಗಾಗಿ ಪಾಟ್ನಾಕ್ಕೆ ಆಗಮಿಸಿದ್ದ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ರಾಜೀವ್ ನಗರದಲ್ಲಿರುವ ಸುಶಾಂತ್ ಸಿಂಗ್ ಅವರ ನಿವಾಸಕ್ಕೆ ತೆರಳಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ಸುಶಾಂತ್ ನಿವಾಸಕ್ಕೆ ರವಿಶಂಕರ್ ಪ್ರಸಾದ್.. ಕೇಂದ್ರ ಸಚಿವರಿಂದ ಕುಟುಂಬಸ್ಥರಿಗೆ ಸಾಂತ್ವನ - ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್
ಇತ್ತೀಚೆಗಷ್ಟೆ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿವಾಸಕ್ಕೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ಬಗ್ಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಾತನಾಡಿರುವ ಪ್ರಸಾದ್, ಸುಶಾಂತ್ ತಂದೆಗೆ ತಮ್ಮ ಮಗನ ಬಗ್ಗೆ ತುಂಬಾ ಹೆಮ್ಮೆ ಇದೆ. ಆಕಾಶದೆತ್ತರಕ್ಕ ಬೆಳೆಯುವ ಸಾಮರ್ಥ್ಯವಿದ್ದ ಸುಶಾಂತ್ ನಮ್ಮನೆಲ್ಲ ಬಿಟ್ಟು ಬೇಗ ಹೊರಟು ಹೋಗಿದ್ದಾರೆ. ಭವಿಷ್ಯದ ಶಾರುಖ್ ಖಾನ್‌ನ ಆತನಲ್ಲಿ ಕಾಣುತ್ತಿದ್ದರು ಎಂದು ಸುಶಾಂತ್ ತಂದೆ ಮತ್ತು ಸಹೋದರಿಗೆ ನಾನು ತಿಳಿಸಿದೆ ಎಂದರು.
ಈ ಬಗ್ಗೆ ಟ್ವೀಟ್ ಮಾಡಿರುವ ರವಿಶಂಕರ್ ಪ್ರಸಾದ್, ಸುಶಾಂತ್ ಸಿಂಗ್ ರಜಪೂತ್ ಅವರ ಪಾಟ್ನಾ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಂತಾಪ ಸೂಚಿಸಲಾಯಿತು. ಒಬ್ಬ ಪ್ರತಿಭಾವಂತ ನಟ ದುರದೃಷ್ಟಕರ ಅಂತ್ಯ ಕಾಣಬೇಕಾಯಿತು. ಅವರು ಇನ್ನೂ ಎತ್ತರಕ್ಕೆ ಬೆಳೆಯಲು ಹೆಚ್ಚು ಅರ್ಹರಾಗಿದ್ದರು ಎಂದಿದ್ದಾರೆ.