ಕರ್ನಾಟಕ

karnataka

ETV Bharat / bharat

ಬಿಜೆಪಿ ಸಂಸದೀಯ ಪಕ್ಷದ ಸಭೆ.. ಟಿಎಂಸಿಯಿಂದ ವಿಪ್​ ಜಾರಿ - ವಿಪ್​ ಜಾರಿ

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ, ಟಿಎಂಸಿ ಹಾಗೂ ಕಾಂಗ್ರೆಸ್​ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.

ವಿಪ್​ ಜಾರಿ

By

Published : Jul 30, 2019, 10:10 AM IST

Updated : Jul 30, 2019, 11:08 AM IST

ನವದೆಹಲಿ:ಇಂದು ರಾಜ್ಯಸಭೆಯಲ್ಲಿ ಸರ್ಕಾರ ತ್ರಿವಳಿ ತಲಾಖ್​ ವಿಧೇಯಕ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್​ ಆರಂಭಕ್ಕೂ ಮುನ್ನ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಸುತ್ತಿದೆ.

ಸಭೆಗೆ ಗೃಹ ಸಚಿವ ಅಮಿತ್​ ಶಾ, ಅರ್ಜುನ್​​ ರಾಮ್​ ಮೇಗ್ವಾಲ್​, ಪ್ರಹ್ಲಾದ್​ ಜೋಶಿ ಸೇರಿದಂತೆ ಪ್ರಮುಖರು ಸಂಸದೀಯ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು ರಾಜ್ಯಸಭೆಯಲ್ಲಿ ಮಂಡನೆ ಆಗಲಿರುವ ತ್ರಿವಳಿ ತಲಾಖ್​ ಬಿಲ್​ ಪಾಸ್​ ಮಾಡಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.

ಬಿಜೆಪಿ ಸಂಸದೀಯ ಪಕ್ಷದ ಸಭೆ

ರಾಜ್ಯಸಭೆ ಅಂಗೀಕಾರಕ್ಕೆ ತ್ರಿವಳಿ ತಲಾಖ್ ಮಸೂದೆ.. ಪ್ರತಿಪಕ್ಷಗಳಿಂದ ಗದ್ದಲ ಸಾಧ್ಯತೆ

ಇನ್ನು ತೃಣಮೂಲ ಕಾಂಗ್ರೆಸ್​​​​​ ತನ್ನ ಎಲ್ಲ ಸದಸ್ಯರಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದು, ವಿಪ್​ ಜಾರಿ ಮಾಡಿದೆ. ರಾಜ್ಯಸಭೆಯಲ್ಲಿ ಇಂದು ಹಾಗೂ ಮುಂದಿನ ಎರಡು ದಿನ ಹಾಜರಿರಲೇಬೇಕು ಎಂದು ವಿಪ್​​ನಲ್ಲಿ ಸೂಚಿಸಲಾಗಿದೆ.

ಅಷ್ಟೇ ಅಲ್ಲ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್​ ಸಹ ವಿಪ್​ ಜಾರಿ ಮಾಡಿದೆ. ಕಾಂಗ್ರೆಸ್​ ಸಹ ಮಹತ್ವದ ಸಭೆ ನಡೆಸಿ ಇಂದು ರಾಜ್ಯಸಭೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದೆ.

Last Updated : Jul 30, 2019, 11:08 AM IST

ABOUT THE AUTHOR

...view details