ಕರ್ನಾಟಕ

karnataka

By

Published : Apr 5, 2020, 4:54 PM IST

Updated : Apr 5, 2020, 4:59 PM IST

ETV Bharat / bharat

ಪ್ರತಿ 4.1 ದಿನಕ್ಕೊಮ್ಮೆ ಭಾರತದಲ್ಲಿ ಸೋಂಕಿತರ ಪ್ರಮಾಣ ದ್ವಿಗುಣ; ದೇಶದಲ್ಲಿ 3,374 ಸೋಂಕಿತರು

ಈವರೆಗೆ ದೇಶದ 274 ಜಿಲ್ಲೆಗಳ ಜನತೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸದ್ಯ ಕೊರೊನಾ ಪ್ರಕರಣಗಳು ಸರಾಸರಿ 4.1 ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ. ಇದು ತಬ್ಲಿಘಿ ಜಮಾಅತ್​ ಸದಸ್ಯರಿಂದಾಗಿ ಇಷ್ಟು ಕಡಿಮೆ ದಿನಗಳ ಅಂತರದಲ್ಲಿ ಪ್ರಕರಣ ಡಬಲ್​ ಆಗುತ್ತಿದೆ. ಒಂದು ವೇಳೆ ದೇಶದಲ್ಲಿ ತಬ್ಲಿಘಿ ಜಮಾಅತ್ ಸದಸ್ಯರ ಪ್ರಕರಣ ಆಗುತ್ತಿಲ್ಲವಾಗಿದ್ದರೆ, ಈ ಪ್ರಮಾಣ 7.4 ದಿನಗಳಿಗೊಮ್ಮೆ ದ್ವಿಗುಣಗಳ್ಳುತ್ತಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

Union Health Ministry
ಲಾವ್ ಅಗರ್ವಾಲ್

ನವದೆಹಲಿ:ನಿನ್ನೆಯಿಂದ 472 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ದೇಶದಲ್ಲಿ ಈವರೆಗೆ 3,374 ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

ಈವರೆಗೆ 79 ಜನ ಸಾವು:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯಿಂದ 11 ಜನ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 79 ಕ್ಕೇರಿದೆ. ಇನ್ನೊಂದೆಡೆ ಒಟ್ಟು ಸೋಂಕಿತರಲ್ಲಿ 267 ಜನರು ಚೇತರಿಸಿಕೊಂಡಿದ್ದು, ಅಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

4.1 ದಿನಗಳಿಗೊಮ್ಮೆ ಸೋಂಕಿತರ ಪ್ರಮಾಣ ದ್ವಿಗುಣ:

ಈವರೆಗೆ ದೇಶದ 274 ಜಿಲ್ಲೆಗಳ ಜನತೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸದ್ಯ ಕೊರೊನಾ ಪ್ರಕರಣಗಳು ಸರಾಸರಿ 4.1 ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ. ಇದು ತಬ್ಲಿಘಿ ಜಮಾತ್​ ಸದಸ್ಯರಿಂದಾಗಿ ಇಷ್ಟು ಕಡಿಮೆ ದಿನಗಳ ಅಂತರದಲ್ಲಿ ಪ್ರಕರಣ ಡಬಲ್​ ಆಗುತ್ತಿದೆ. ಒಂದು ವೇಳೆ ದೇಶದಲ್ಲಿ ತಬ್ಲಿಘಿ ಜಮಾತ್ ಸದಸ್ಯರ ಪ್ರಕರಣ ಆಗುತ್ತಿಲ್ಲವಾಗಿದ್ದರೆ, ಈ ಪ್ರಮಾಣ 7.4 ದಿನಗಳಿಗೊಮ್ಮೆ ದ್ವಿಗುಣಗಳ್ಳುತ್ತಿತ್ತು ಎಂದು ಅಗರ್ವಾಲ್​ ತಿಳಿಸಿದ್ದಾರೆ.

75 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಪೂರೈಕೆ:

ಎಲ್ಲಾ ರಾಜ್ಯ ಸರ್ಕಾರಗಳು ಲಾಕ್ ಡೌನ್ ಮಾರ್ಗಸೂಚಿಗಳನ್ನು ಅನುಸರಿಸುತ್ತಿವೆ. ಸದ್ಯ ಅಗತ್ಯ ಸರಕು ಮತ್ತು ಸೇವೆಗಳ ಪರಿಸ್ಥಿತಿ ತೃಪ್ತಿಕರವಾಗಿದೆ. ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲಿ 27,661 ಪರಿಹಾರ ಶಿಬಿರಗಳು ಮತ್ತು ಆಶ್ರಯ ತಾಣಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 23,924 ಸರ್ಕಾರ ಸ್ಥಾಪಿಸಿದ್ದರೆ, ಉಳಿದ 3,737 ಆಶ್ರಯಗಳನ್ನು ಸರ್ಕಾರೇತರ ಸಂಸ್ಥೆಗಳು ಸ್ಥಾಪಿಸಿವೆ.

ಒಟ್ಟು 12.5 ಲಕ್ಷ ಜನರು ಅದರಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅಲ್ಲದೆ 19,460 ಆಹಾರ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ. ಇದರಲ್ಲಿ 9,951 ಸರ್ಕಾರ ಸ್ಥಾಪಿಸಿದ್ದರೆ, ಉಳಿದ 9,509ನ್ನು ಸರ್ಕಾರೇತರ ಸಂಸ್ಥೆಗಳು ಸ್ಥಾಪಿಸಿವೆ. 75 ಲಕ್ಷಕ್ಕೂ ಹೆಚ್ಚು ಜನರಿಗೆ ನಿಯಮಿತವಾಗಿ ಆಹಾರ ಒದಗಿಸಲಾಗುತ್ತಿದೆ. 13.6 ಲಕ್ಷ ಕಾರ್ಮಿಕರಿಗೆ ಅವರ ಮಾಲಿಕರಿಂದ ಮತ್ತು ಉದ್ಯಮದ ಕಡೆಯಿಂದ ಆಶ್ರಯ ಮತ್ತು ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ತಿಳಿಸಿದ್ದಾರೆ.

Last Updated : Apr 5, 2020, 4:59 PM IST

ABOUT THE AUTHOR

...view details