ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಹಲವು ಪ್ರಮುಖ ನಿರ್ಧಾರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯ್ತು.

ಮೋದಿ, modi
ಮೋದಿ

By

Published : Jan 8, 2020, 3:03 PM IST

ನವದೆಹಲಿ:ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಹಲವು ಪ್ರಮುಖ ನಿರ್ಧಾರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯ್ತು.

ಭಾರತ ಮತ್ತು ಫ್ರಾನ್ಸ್ ನಡುವಿನ ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದವನ್ನು ಅಂಗೀಕರಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಮಾರ್ಚ್ 2018ರಲ್ಲಿ ಸಹಿ ಮಾಡಲಾದ ಈ ಒಪ್ಪಂದವು 7 ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಸ್ವಯಂ ನವೀಕರಣ ನಿಬಂಧನೆಗಳನ್ನು ಒಳಗೊಂಡಿದೆ.

ಭಾರತೀಯ ರೈಲ್ವೆಗೆ ಇಂಧನ ಸ್ವಾವಲಂಬನೆಗಾಗಿ ಭಾರತ ಮತ್ತು ಯುಕೆ(ಯುನೈಟೆಡ್ ಕಿಂಗ್‌ಡಮ್) ನಡುವಿನ ಒಪ್ಪಂದಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರಕಿದೆ.

ಇನ್ನೊಂದೆಡೆ ಗುಜರಾತ್​ನ ಜಾಮ್‌ ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯ ಆವರಣದಲ್ಲಿ ಆಯುರ್ವೇದ ಸಮೂಹ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆ (ಐಎನ್‌ಐ) ಯ ಸ್ಥಾನಮಾನವನ್ನು ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ABOUT THE AUTHOR

...view details