ನವದೆಹಲಿ:ದೇಶಾದ್ಯಂತ ಕೊರೊನಾ ಹಾವಳಿ ಜೋರಾಗಿದೆ. ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿರುವ ಕಾರಣ ರೋಗದ ವಿರುದ್ಧ ಸಾಂಘಿಕ ಹೋರಾಟ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಇಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು, ಕೇಂದ್ರ ಸಚಿವರು ಹಾಗೂ ಸಂಸತ್ ಸದಸ್ಯರುಗಳ ವರ್ಷದ ಸಂಬಳದಲ್ಲಿ ಶೇ.30ರಷ್ಟು ಕಡಿತ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಒಂದು ವರ್ಷದ ಸಂಬಳದಲ್ಲಿ ಕಡಿತಗೊಳಿಸಿದ ಹಣವನ್ನು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಪ್ರಕಾಶ್ ಜಾವ್ಡೇಕರ್ ಸುದ್ದಿಗೋಷ್ಠಿ ಕೇಂದ್ರ ಸಚಿವ ಸಂಪುಟದ ಈ ನಿರ್ಧಾರದಿಂದ ಓರ್ವ ಸಂಸದರ ನಿಧಿಯಿಂದ ವರ್ಷಕ್ಕೆ 5 ಕೊಟಿ ರೂ. ಸಂಸದ ನಿಧಿ ಇರುತ್ತದೆ. ಹೀಗಾಗಿ ಒಟ್ಟು 10 ಕೋಟಿ ರೂ ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, 2020-21 ಮತ್ತು 2021-22ಸಾಲಿನ ಸಂಸದರ ನಿಧಿ ಸಂಪೂರ್ಣವಾಗಿ ಕೊರೋನಾ ವಿರುದ್ಧದ ಹೋರಾಟಕ್ಕೆ ಮೀಸಲು ಇಡಲಿದೆ. ಉಳಿದಂತೆ ಮಾಜಿ ಸಂಸದರ ನಿವೃತ್ತಿ ವೇತನದಲ್ಲೂ ಶೇ. 30ರಷ್ಟು ಕಡಿತವಾಗಲಿದೆ.
ಹೀಗೆ ಕಡಿತಗೊಳಿಸಲಾಗುವ ಸುಮಾರು 7,900 ಕೋಟಿ ರೂ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಬಳಸಲು ನಿರ್ಧರಿಸಲಾಗಿದೆ. ಇದ್ರ ಜತೆಗೆ ಭತ್ಯೆ ಮತ್ತು ಪಿಂಚಣಿಯಲ್ಲೂ ಕಡಿತಗೊಳಿಸಲಾಗಿದೆ. ಇನ್ನು ಮುಂದಿನ ಎರಡು ವರ್ಷ ಸಂಸದರ ನಿಧಿ ಸ್ಥಗಿತಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, 1954ರ ಪಾರ್ಲಿಮೆಂಟರಿ ಕಾಯ್ದೆಯ ಸೆಕ್ಷನ್ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.